Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ ಮುಖಕ್ಕೆ ಬಾಲ್ ಎಸೆದ ಬಾಲ್ ಬಾಯ್

ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ ಮುಖಕ್ಕೆ ಬಾಲ್ ಎಸೆದ ಬಾಲ್ ಬಾಯ್
Cuttack , ಶುಕ್ರವಾರ, 20 ಜನವರಿ 2017 (09:16 IST)
ಕಟಕ್: ಏಕದಿನ ಪಂದ್ಯದ ರೋಚಕ ಘಟ್ಟದ ವೇಳೆ ಹಲವು ಎಡವಟ್ಟುಗಳೂ ನಡೆಯುತ್ತವೆ. ಆದರೆ ನಿನ್ನೆ ನಡೆದ ಭಾರತದ ವಿರುದ್ದಧ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ ಮುಖಕ್ಕೆ ಬಾಲ್ ಬಾಲ್ ಚೆಂಡು ಎಸೆದ ಘಟನೆ ನಡೆದಿದೆ.

ಸ್ಲಾಗ್ ಓವರ್ ಗಳಲ್ಲಿ ಭಾರತ ಯರ್ರಾ ಬಿರ್ರಿ ಬೌಂಡರಿ ಚಚ್ಚುತ್ತಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಹೊಡೆದ ಬಾಲ್ ಪ್ರೇಕ್ಷಕರ ಗ್ಯಾಲರಿಯತ್ತ ಬಿತ್ತು. ಇಲ್ಲಿಯೇ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೋಕ್ಸ್ ಬಾಲ್ ಬಾಯ್ ಪ್ರೇಕ್ಷಕರ ಕೈಯಿಂದ ಚೆಂಡು ಮರಳಿಸುವುದನ್ನೇ ಕಾಯುತ್ತಿದ್ದರು.

ಆದರೆ ಅವರು ಬೇರೆ ಕಡೆಗೆ ತಿರುಗಿ ನೋಡುತ್ತಿದ್ದಾಗ ಬಾಲ್ ಬಾಯ್ ಚೆಂಡು ಎಸೆದಿದ್ದು, ನೇರವಾಗಿ ಸ್ಟೋಕ್ಸ್ ಮುಖದ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಸ್ಟೋಕ್ಸ್ ಬಾಲ್ ಬಾಯ್ ಗೆ ಬಯ್ಗುಳದ ಸುರಿಮಳೆಗೈಯ್ದರು. ಆದರೆ ಬಾಲ್ ಬಾಯ್ ಬೇಕಂತಲೇ ಹೀಗೆ ಮಾಡಿರಲಿಲ್ಲ. ಆದರೂ ಸ್ಟೋಕ್ಸ್ ಗೆ ಇದು ಅವಮಾನಕಾರಿ ಎನಿಸಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ಪುಡಿಗಟ್ಟಿದ ಯುವಿ-ಮಹಿ ಜೋಡಿ