Select Your Language

Notifications

webdunia
webdunia
webdunia
webdunia

ಮಗನ ಜತೆ ಸೈಕಲ್ ರೈಡ್ ಮಾಡಿದ ಕೋಚ್ ಅನಿಲ್ ಕುಂಬ್ಳೆ

ಮಗನ ಜತೆ ಸೈಕಲ್ ರೈಡ್ ಮಾಡಿದ ಕೋಚ್ ಅನಿಲ್ ಕುಂಬ್ಳೆ
Bangalore , ಮಂಗಳವಾರ, 27 ಡಿಸೆಂಬರ್ 2016 (07:30 IST)
ಬೆಂಗಳೂರು: ಸದ್ಯಕ್ಕೆ ಟೀಂ ಇಂಡಿಯಾದ ಸದಸ್ಯರೆಲ್ಲರೂ ರಜಾದ ಮಜಾ ಪಡೆಯುತ್ತಿದ್ದಾರೆ. ಎಷ್ಟೋ ದಿನಗಳ ನಂತರ ಸಿಕ್ಕಿದ ಬಿಡುವು. ಜತೆಗೆ ಕ್ರಿಸ್ ಮಸ್ ರಜೆ ಬೇರೆ. ಸುಮ್ಮನೆ ಬಿಟ್ಟಾರೆಯೇ? ಇದಕ್ಕೆ ಕೋಚ್ ಅನಿಲ್ ಕುಂಬ್ಳೆ ಕೂಡಾ ಹೊರತಲ್ಲ.


ಪ್ರಕೃತಿ ಪ್ರಿಯ ಅನಿಲ್ ಕುಂಬ್ಳೆ, ಸದಾ ಪ್ರಾಣಿ ಪಕ್ಷಿಗಳ ಜತೆ ಸಮಯ ಕಳೆಯುತ್ತಾರೆ. ಆದರೆ ಫಾರ್ ಎ ಚೇಂಜ್, ಕ್ಯಾಮರಾ ಬಿಟ್ಟು, ಬೆಟ್ಟ ಗುಡ್ಡಗಳ ದಾರಿಯಲ್ಲಿ ಮಗನ ಜತೆ ಸೈಕಲ್ ರೈಡಿಂಗ್ ಮಾಡಿದ್ದಾರೆ. ಇದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಈಗಾಗಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಗೆಳತಿ ಜತೆ ಕ್ರಿಸ್ ಮಸ್ ಪಾರ್ಟಿ ಮಾಡುತ್ತಿದ್ದರೆ, ಶಿಖರ್ ಧವನ್ ಪ್ರವಾಸ ಹೋಗಿದ್ದಾರೆ. ಇನ್ನು, ರವಿಚಂದ್ರನ್ ಅಶ್ವಿನ್ ಹೊಸ ಮಗುವಿನ ಜತೆ ಆಟವಾಡುತ್ತಿದ್ದಾರೆ. ಬಹುಶಃ ಯಂಗ್ ಇಂಡಿಯನ್ ಟೀಂ ಜತೆ ಸೇರಿಕೊಂಡು ಸದಾ ಸೀರಿಯಸ್ ಆಗಿರುವ ಕುಂಬ್ಳೆ ಕೂಡಾ ಮಜಾ ಮಾಡಲು ಕಲಿತಿರಬೇಕು. ಅದಕ್ಕೇ ಸೈಕಲ್ ಏರಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲಬ್ ಲೆವೆಲ್ ನಲ್ಲಿ ಚತುರ್ಶತಕ ಸಿಡಿಸಿದ ಕ್ರಿಕೆಟಿಗ!