ಮುಂಬೈ: ಐಪಿಎಲ್ ಬಂತು. ಆ ದೇಶ ವಿದೇಶ ಅಂತೆಲ್ಲಾ ಏನೂ ಇಲ್ಲ. ಈಗ ಯಾವ ಫ್ರಾಂಚೈಸಿ ಅನ್ನುವುದಷ್ಟೇ ಮುಖ್ಯ. ಹಾಗಾಗಿ ಬಾರೋ ಗೆಳೆಯ ಅಂದಿದ್ದೇ ತಡ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಮೊನ್ನೆ ನಡೆದ ಸ್ಲೆಡ್ಜಿಂಗ್ ರಗಳೆಗಳನ್ನೆಲ್ಲಾ ಮರೆತು ಆಸೀಸ್ ನಾಯಕ ಸ್ಟೀವ್ ಸ್ಮಿತ್ ದೋಸ್ತ್ ಆಗಿದ್ದಾರೆ!
ಸ್ಮಿತ್ ಮತ್ತು ಟೀಂ ಇಂಡಿಯಾ ನಡುವೆ ಟೆಸ್ಟ್ ಸರಣಿಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿತ್ತು. ಸರಣಿ ಮುಗಿದ ಮೇಲೆ ಸ್ಮಿತ್ ಐಯಾಮ್ ಸಾರಿ ಎಂದಿದ್ದೂ ಆಯಿತು. ಇದೀಗ ಐಪಿಎಲ್ ನ ಪುಣೆ ತಂಡದಲ್ಲಿ ರೆಹಾನೆ ಮತ್ತು ಸ್ಮಿತ್ ಒಂದೇ ತಂಡದಲ್ಲಿ ಆಡುತ್ತಿದ್ದಾರೆ.
ಸರಣಿ ಮುಗಿದ ಮೇಲೆ ಬೀರ್ ಪಾರ್ಟಿಗೆ ಸ್ಮಿತ್ ಆಹ್ವಾನಿಸಿದರೂ, ರೆಹಾನೆ ಮತ್ತು ಬಳಗ ಹೋಗಲಿಲ್ಲ. ಆದರೆ ನಾಯಕ ಕೊಹ್ಲಿ ಮಾತ್ರ ಇನ್ನು ಮುಂದೆ ಆಸೀಸ್ ಕ್ರಿಕೆಟಿಗರ ಜತೆ ಸ್ನೇಹ ಸಾಧ್ಯವಿಲ್ಲ ಎಂದು ವಿವಾದಕ್ಕೀಡಾಗಿದ್ದರು.
ಆದರೆ ರೆಹಾನೆ ಮಾತ್ರ ಹಾಗಿಲ್ಲವಂತೆ. ಬೀರ್ ಪಾರ್ಟಿಗೆ ಹೋಗದಿದ್ದರೂ, ಸ್ಮಿತ್ ಮತ್ತು ನಾನು ಒಳ್ಳೆ ಸ್ನೇಹಿತರು. ಕೊಹ್ಲಿ ಯಾಕೆ ಹಾಗೆ ಹೇಳಿದರು ಎಂದು ಅವರನ್ನೇ ಕೇಳಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ