Select Your Language

Notifications

webdunia
webdunia
webdunia
webdunia

13 ವರ್ಷದ ನಂತರ ರೈಲಿನಲ್ಲಿ ಪ್ರಯಾಣಿಸಿದ ಧೋನಿ

13 ವರ್ಷದ ನಂತರ ರೈಲಿನಲ್ಲಿ ಪ್ರಯಾಣಿಸಿದ ಧೋನಿ
Ranchi , ಬುಧವಾರ, 22 ಫೆಬ್ರವರಿ 2017 (12:12 IST)
ರಾಂಚಿ: ಧೋನಿ ಟೀಂ ಇಂಡಿಯಾ ನಾಯಕ ಸ್ಥಾನದಿಂದ ಕೆಳಗಿಳಿದ ಮೇಲೆ ಇದುವರೆಗೆ ಮಾಡದ ಕೆಲಸವನ್ನೆಲ್ಲಾ ಮಾಡುತ್ತಿದ್ದಾರೆ. ಇದೀಗ 13 ವರ್ಷದ ನಂತರ ರೈಲಿನಲ್ಲಿ ಸಹ ಆಟಗಾರರೊಂದಿಗೆ ಪ್ರಯಾಣಿಸಿ ಸುದ್ದಿ ಮಾಡಿದ್ದಾರೆ.

 
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುವ ಧೋನಿ ವಿಜಯ್ ಹಜಾರೆ ಟ್ರೋಫಿಗಾಗಿ ತಮ್ಮ ಕೋಲ್ಕೊತ್ತಾಗೆ ಪ್ರಯಾಣ ಮಾಡಲು ಅವರು ರೈಲಿನ ಹಾದಿ ಹಿಡಿದಿದ್ದಾರೆ. ಸದಾ ವಿಮಾನದಲ್ಲಿ ಕೂತು ಬೇಜಾರಾಗಿರಬೇಕು. ಅದಕ್ಕೇ ಇನ್ ಸ್ಟಾಗ್ರಾಂನಲ್ಲಿ ಫೋಟೋ ಪ್ರಕಟಿಸಿದ್ದಲ್ಲದೆ “13 ವರ್ಷಗಳ ನಂತರ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಫೆಬ್ರವರಿ 25 ರಿಂದ ಕೋಲ್ಕೊತ್ತಾದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಧೋನಿ ನೇತೃತ್ವದ ಜಾರ್ಖಂಡ್ ತಂಡ ಕರ್ನಾಟಕ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗೆ ಮತ್ತೆ ಒಲಿದ ನಾಯಕನ ಪಟ್ಟ