Publish Date: Thu, 20 Oct 2016 (08:57 IST)
Updated Date: Thu, 20 Oct 2016 (13:16 IST)
ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕುರಿತ “ಡ್ರಿವನ್: ದಿ ವಿರಾಟ್ ಕೊಹ್ಲಿ ಸ್ಟೋರಿ” ಪುಸ್ತಕ ಅನಾವರಣಗೊಂಡಿದೆ.
ಪತ್ರಕರ್ತ ವಿಜಯ್ ಲೋಕಪಾಲಿ ಪುಸ್ತಕದ ಲೇಖಕರು. ಇದನ್ನು ಸಮಾರಂಭವೊಂದರಲ್ಲಿ ಸ್ವತಃ ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರು ಉಪಸ್ಥಿತರಿದ್ದರು.
“ನನ್ನ ಬಗ್ಗೆ ಪುಸ್ತಕ ಬರೆದ ವಿಜಯ್ ಸರ್ ಗೆ ನನ್ನ ಧನ್ಯವಾದಗಳು ಮತ್ತು ನನ್ನ ವೃತ್ತಿ ಜೀವನಕ್ಕೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ