Select Your Language

Notifications

webdunia
webdunia
webdunia
webdunia

ರಾಯಲ್ ಚಾಲೆಂಜರ್ಸ್ ಪರ ಡಿ ವಿಲಿಯರ್ಸ್‌ಗೆ 13 ಪಂದ್ಯ ಶ್ರೇಷ್ಟ ಪ್ರಶಸ್ತಿಗಳು

ರಾಯಲ್ ಚಾಲೆಂಜರ್ಸ್ ಪರ ಡಿ ವಿಲಿಯರ್ಸ್‌ಗೆ 13 ಪಂದ್ಯ ಶ್ರೇಷ್ಟ ಪ್ರಶಸ್ತಿಗಳು
ಬೆಂಗಳೂರು: , ಬುಧವಾರ, 25 ಮೇ 2016 (11:55 IST)
ಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಪರ 13 ಪಂದ್ಯ ಶ್ರೇಷ್ಟ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಐಪಿಎಲ್ ಟೀಂನಲ್ಲಿ ಆಟಗಾರ ಗೆದ್ದ ಎರಡನೇ ಅತ್ಯಧಿಕ ಪ್ರಶಸ್ತಿಗಳಾಗಿವೆ. ಕ್ರಿಸ್ ಗೇಲ್ ಇದೇ ತಂಡದಲ್ಲಿ 16 ಪಂದ್ಯ ಶ್ರೇಷ್ಟ ಪ್ರಶಸ್ತಿ ಗೆದ್ದಿದ್ದಾರೆ.  ಒಟ್ಟಾರೆಯಾಗಿ ಇದು ಅವರ 15ನೇ ಪ್ರಶಸ್ತಿಯಾಗಿದ್ದು ಕ್ರಿಸ್ ಗೇಲ್ 17 ಮತ್ತು ಯುಸುಫ್ ಪಠಾಣ್ 16 ಗೆದ್ದಿದ್ದಾರೆ.
ಡಿ ವಿಲಿಯರ್ಸ್ ಈ ಐಪಿಎಲ್‌ನಲ್ಲಿ ಏಳು ಬಾರಿ 50ರನ್ ಗಡಿ ದಾಟಿದ್ದಾರೆ.

ಕೊಹ್ಲಿ 2016ರಲ್ಲಿ 10 ಬಾರಿ 50 ರನ್, ಗೇಲ್ 2012ರಲ್ಲಿ 8 ಬಾರಿ 50 ರನ್ ಮತ್ತು ವಾರ್ಸನರ್ 2015 ಮತ್ತು 2016ರಲ್ಲಿ ಏಳು ಬಾರಿ ಐವತ್ತರ ಗಡಿ ಮುಟ್ಟಿದ್ದಾರೆ.
 
ಐಪಿಎಲ್ ಸೀಸ‌ನ್‌ನಲ್ಲಿ ಡಿ ವಿಲಿಯರ್ಸ್ ಸ್ಕೋರ್ ಮಾಡಿದ 682 ರನ್ 5ನೇ ಅತ್ಯಧಿಕವಾಗಿದೆ. ಐಪಿಎಲ್ ಸೀಸನ್‍ವೊಂದರಲ್ಲಿ ಟಾಪ್ 5 ರನ್ ಸ್ಕೋರ್ ಮಾಡಿದವರಲ್ಲಿ ನಾಲ್ವರು ರಾಯಲ್ ಚಾಲೆಂಜರ್ಸ್‌ಗೆ ಸೇರಿದವರು.ಡಿ ವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ ಅವರ ಅಜೇಯ 91 ರನ್ ಜತೆಯಾಟವು ಎರಡನೇ ಅತ್ಯಧಿಕ ಏಳನೇ ವಿಕೆಟ್ ಜತೆಯಾಟವಾಗಿದೆ. ಕಳೆದ ಸೀಸನ್‌ನಲ್ಲಿ ವಾಂಖಡೆ ಸ್ಟೇಡಿಯಂನಲ್ಲಿ ಹರ್ಭಜನ್ ಸಿಂಗ್ ಮತ್ತು ಜಗದೀಶ್ ಸುಚಿತ್ ನಡುವೆ 100 ರನ್ ಜತೆಯಾಟವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ವಿಲಿಯರ್ಸ್ ಚೇಸ್‌ಗಳಲ್ಲಿ 13 ನಾಟ್ ಔಟ್‌ಗಳು, 13 ಗೆಲವುಗಳು