ಲಂಡನ್: ಒಂದೇ ವರ್ಷದಲ್ಲಿ ಮೂರು ದ್ವಿಶತಕಗಳು, ಸಾಲು ಸಾಲು ಶತಕಗಳು, ಪಂದ್ಯ ಶ್ರೇಷ್ಠ ಪ್ರಶಸ್ತಿಗಳು ಹೀಗೆ ವಿರಾಟ್ ಕೊಹ್ಲಿಗೆ ಇದು ಕನಸಿನ ವರ್ಷ. ಅವರ ಪ್ರಚಂಡ ಫಾರ್ಮ್ ನೋಡಿ ಅವರನ್ನು ಸಚಿನ್ ತೆಂಡುಲ್ಕರ್ ಗಿಂತಲೂ ಶ್ರೇಷ್ಠ ಎನ್ನುವವರಿದ್ದಾರೆ.
ಆದರೆ ತೆಂಡುಲ್ಕರ್ ನಂತೆ ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ತೆಂಡುಲ್ಕರ್ ಯಾವತ್ತಿದ್ದರೂ ತೆಂಡುಲ್ಕರ್. ಕೊಹ್ಲಿ ಅವರಂತಾಗಲು ಸಾಧ್ಯವಿಲ್ಲ. ಇದೆಲ್ಲಾ ಮಾನವ ಸಹಜ ಗುಣ. ನಾವೀಗ ಏನು ಅದ್ಭುತವನ್ನು ನೋಡುತ್ತೇವೋ. ಅದುವೇ ಉಳಿದೆಲ್ಲಕ್ಕಿಂತಲೂ ಶ್ರೇಷ್ಠ ಎಂದುಕೊಳ್ಳುವುದು. ಕೊಹ್ಲಿ ವಿಚಾರದಲ್ಲೂ ಇದುವೇ ಆಗಿರುವುದು ಎಂದು ಇಂಗ್ಲೆಂಡ್ ನ ಮಾಜಿ ಆರಂಭಿಕ ಜೆಫ್ರಿ ಬಾಯ್ಕಾಟ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಸುನಿಲ್ ಗವಾಸ್ಕರ್, ತೆಂಡುಲ್ಕರ್ ಗಿಂತ ಉತ್ತಮರೇ? ಹಾಗಿದ್ದರೆ ಗವಾಸ್ಕರ್ ಉತ್ತಮ ಬ್ಯಾಟ್ಸ್ ಮನ್ ಅಲ್ಲವೇ? ಹಾಗೇನಲ್ಲ. ಯುವ ಆಟಗಾರರು ಉತ್ತಮ ಆಟಗಾರರೇ. ಆದರೆ ಗವಾಸ್ಕರ್ ಮತ್ತು ತೆಂಡುಲ್ಕರ್ ಯಾವತ್ತಿಗೂ ದಿಗ್ಗಜರು ಎಂದು ಜೆಫ್ರಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ