Select Your Language

Notifications

webdunia
webdunia
webdunia
webdunia

‘ವಿರಾಟ್ ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೋ’

‘ವಿರಾಟ್ ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೋ’
Mumbai , ಸೋಮವಾರ, 16 ಜನವರಿ 2017 (14:52 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫುಟ್ ಬಾಲ್ ದಂತಕತೆ ಕ್ರಿಸ್ಟಿಯಾನೋ ರೊನಾಲ್ಡೋ ಅವರಿದ್ದಂತೆ ಎಂದು ಇಂಗ್ಲೆಂಡ್ ನ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 63 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಪರಿಸ್ಥಿತಿಯಲ್ಲಿದ್ದ ಟೀಂ ಇಂಡಿಯಾವನ್ನು 350 ರನ್ ಗಳ ಅಸಾಧ್ಯ ಮೊತ್ತ ಬೆನ್ನತ್ತಿ ಜಯ ಕೊಡಿಸಿದ ನಾಯಕನ ಆಟವನ್ನು ನೋಡಿ ಹುಸೇನ್ ಈ ಅಭಿಪ್ರಾಯಪಟ್ಟಿದ್ದಾರೆ.

“ನಾಯಕನಾಗಿ ಅವರಿಗೆ ಮೂರೂ ಮಾದರಿಯ ಕ್ರಿಕೆಟ್ ನ ಜವಾಬ್ದಾರಿ ಭಾರ ಎನಿಸುತ್ತದೆಯೇ ಎಂದರೆ ಯಾರೂ ಅವರನ್ನು ನೋಡಿ ಹೌದು ಎನ್ನಲಾರರು. ಅಷ್ಟು ಅದ್ಭುತವಾಗಿ ಆಡುತ್ತಿದ್ದಾರೆ” ಎಂದು ಹುಸೇನ್ ಹೊಗಳಿದ್ದಾರೆ.

ಇಂಗ್ಲೆಂಡ್ ನ ಇನ್ನೊಬ್ಬ ಮಾಜಿ ನಾಯಕ ಮೈಕಲ್ ವಾನ್ ಕೂಡಾ ಕೊಹ್ಲಿಯನ್ನು ಅನ್ಯ ಗ್ರಹದಿಂದ ಬಂದ ಆಟಗಾರ ಎಂದು ಮೆಚ್ಚುಗೆಯ ಸರಮಾಲೆ ಸುರಿಸಿದ್ದಾರೆ. ಟೆಸ್ಟ್, ಏಕದಿನ, ಟಿ-ಟ್ವೆಂಟಿ ಮೂರೂ ಮಾದರಿಯ ಅದ್ಭುತ ಆಟಗಾರ ಕೊಹ್ಲಿ ಎಂದು ಅವರು ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯ ಈ ಸಿಕ್ಸರ್ ಗೆ ಕಮೆಂಟರಿ ಹೇಳುವುದನ್ನೂ ಮರೆತ ಕಮೆಂಟೇಟರ್ ಗಳು