Select Your Language

Notifications

webdunia
webdunia
webdunia
webdunia

‘ಅನಿಲ್ ಕುಂಬ್ಳೆ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಇವರಿಗಿಲ್ಲ’

‘ಅನಿಲ್ ಕುಂಬ್ಳೆ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಇವರಿಗಿಲ್ಲ’
NewDelhi , ಶನಿವಾರ, 27 ಮೇ 2017 (08:54 IST)
ನವದೆಹಲಿ: ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಯನ್ನು ಕಿತ್ತು ಹಾಕಲು ಹವಣಿಸುತ್ತಿರುವ ಬಿಸಿಸಿಐ ಅಧಿಕಾರಗಳ ವಿರುದ್ಧ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಕಿಡಿ ಕಾರಿದ್ದಾರೆ.

 
‘ಇವರಿಗೆಲ್ಲಾ ಕುಂಬ್ಳೆ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಇಲ್ಲ. ಅಂತಹವರು ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲು ನೋಡುತ್ತಿದ್ದಾರೆ. ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗಾಗಿ ಲಂಡನ್ ಗೆ ತೆರಳಿರುವಾಗ ಇಂತಹ ಕೆಲಸಕ್ಕೆ ಬಿಸಿಸಿಐ ಮುಂದಾಗಬೇಕಿತ್ತಾ?’ ಎಂದು ಬೇಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐಗೆ ಮುಖ್ಯವಾಗಿ ಕುಂಬ್ಳೆ ಆಟಗಾರರ ವೇತನ ಹೆಚ್ಚಿಸಲು ಬೇಡಿಕೆ ಇಟ್ಟಿರುವುದೇ ನುಂಗಲಾರದ ತುತ್ತಾಗಿದೆ. ಅದಕ್ಕೇ ಇಂತಹ ಮಾರ್ಗ ಅನುಸರಿಸುತ್ತಿದ್ದಾರೆ. ಕುಂಬ್ಳೆಯ ಕಾರ್ಯ ವೈಖರಿ ಪ್ರಶ್ನಾತೀತ ಎಂದು ಬೇಡಿ ವಾದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ಕ್ರಿಕೆಟ್`ನಲ್ಲಿ ತ್ರಿಶತಕದ ದಾಖಲೆ ಬರೆದ ಬಿಲಾಲ್ ಇರ್ಷಾದ್’