Select Your Language

Notifications

webdunia
webdunia
webdunia
webdunia

ಏಕದಿನ ಕ್ರಿಕೆಟ್`ನಲ್ಲಿ ತ್ರಿಶತಕದ ದಾಖಲೆ ಬರೆದ ಬಿಲಾಲ್ ಇರ್ಷಾದ್’

ಏಕದಿನ ಕ್ರಿಕೆಟ್`ನಲ್ಲಿ ತ್ರಿಶತಕದ ದಾಖಲೆ ಬರೆದ ಬಿಲಾಲ್ ಇರ್ಷಾದ್’
ಇಸ್ಲಾಮಾಬಾದ್ , ಶುಕ್ರವಾರ, 26 ಮೇ 2017 (20:35 IST)
ಪಿಸಿಬಿಯ ಫಜಲ್ ಮೆಹ್ಮೂದ್ ಇಂಟರ್ ಕ್ಲಬ್ ಕ್ರಿಕೆಟ್ ಚಾಂಪಿಯನ್ ಷಿಪ್`ನಲ್ಲಿ ಬಿಲಾಲ್ ಇರ್ಷಾದ್ ಎಂಬ ಬ್ಯಾಟ್ಸ್`ಮನ್ ತ್ರಿಶತಕ ಸಿಡಿಸುವ ಮೂಲಕ ಹೊಸದಾಖಲೆ ಬರೆದಿದ್ದಾನೆ.
 

ಶಾಹೀದ್ ಅಲಮ್ ಬಕ್ಸ್ ಕ್ರಿಕೆಟ್ ಕ್ಲಬ್ ಆಟಗಾರನಾಗಿರುವ ಬಿಲಾಲ್, 175 ಎಸೆತಗಳಲ್ಲಿ 9 ಸಿಕ್ಸರ್ 42 ಬೌಂಡರಿ ಸಹಿತ 320 ರನ್ ಸಿಡಿಸಿದ್ದಾರೆ. ಎಐ ರೆಹಮಾನ್ ತಂಡದ ವಿರುದ್ಧದ ಏಕದಿನ ಪಂದ್ಯದಲ್ಲಿ ಬಿಲಾಲ್ ಈ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್`ನಲ್ಲಿ ಇದು ಅತ್ಯಧಿಕ ವೈಯಕ್ತಿಕ ರನ್ ದಾಖಲೆಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್`ನಲ್ಲಿ ಭಾರತದ ರೋಹಿತ್ ಶರ್ಮಾ ಸಿಡಿಸಿರುವ 264 ರನ್ ಇದುವರೆಗೂ ಏಕದಿನ ಕ್ರಿಕೆಟ್`ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ. ರೋಹಿತ್ ಶರ್ಮಾ 2 ಬಾರಿ ದ್ವಿಶತಕ ಸಿಡಿಸಿದ್ದಾರೆ. ಉಳಿದಂತೆ ಸಚಿನ್, ಸೆಹ್ವಾಗ್, ಗಫ್ಟಿಲ್, ಕ್ರಿಸ್ ಗೇಲ್ ಸಹ ಏಕದಿನ ಕ್ರಿಕೆಟ್`ನಲ್ಲಿ ಒಂದೊಂದು ದ್ವಿಶತಕ ಸಿಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಅಶಿಸ್ತು ತೋರುವ ಆಟಗಾರರನ್ನು ಹೊರದಬ್ಬಲು ಶಿಫಾರಸ್ಸು ಮಾಡಿದ ಐಸಿಸಿ ತಾಂತ್ರಿಕ ಸಮಿತಿ