Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಅಶಿಸ್ತು ತೋರುವ ಆಟಗಾರರನ್ನು ಹೊರದಬ್ಬಲು ಶಿಫಾರಸ್ಸು ಮಾಡಿದ ಐಸಿಸಿ ತಾಂತ್ರಿಕ ಸಮಿತಿ

ಮೈದಾನದಲ್ಲಿ ಅಶಿಸ್ತು ತೋರುವ ಆಟಗಾರರನ್ನು ಹೊರದಬ್ಬಲು ಶಿಫಾರಸ್ಸು ಮಾಡಿದ ಐಸಿಸಿ ತಾಂತ್ರಿಕ ಸಮಿತಿ
Dubai , ಶುಕ್ರವಾರ, 26 ಮೇ 2017 (10:20 IST)
ದುಬೈ: ಮೈದಾನದಲ್ಲಿ ಗಂಭೀರ ಅಶಿಸ್ತು ತೋರಿದ ಕ್ರಿಕೆಟಿಗರನ್ನು ಆಟದ ನಡುವೆಯೇ ಮೈದಾನದಿಂದ ಹೊರ ಹಾಕುವ ಶಿಕ್ಷೆ ನೀಡುವ ನಿಯಮಕ್ಕೆ ಐಸಿಸಿಯ ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದೆ.

 
ಲಂಡನ್ ನಲ್ಲಿ ಸಭೆ ಸೇರಿದ ಅನಿಲ್ ಕುಂಬ್ಳೆ ನೇತೃತ್ವದ ತಾಂತ್ರಿಕ ಸಮಿತಿ ಹಲವಾರು ಹೊಸ ನಿಯಮಗಳನ್ನು ಶಿಫಾರಸ್ಸು ಮಾಡಿದೆ. ಇದರಲ್ಲಿ ಎಲ್ಲಾ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಡಿಆರ್ ಎಸ್ ನಿಯಮಗಳನ್ನು ಜಾರಿ ಮಾಡಬೇಕು ಎಂದೂ ಶಿಫಾರಸ್ಸು ಮಾಡಿದೆ.

ಇದಲ್ಲದೆ ಕ್ರಿಕೆಟ್ ನ ಹಲವು ನಿಯಮಗಳಿಗೆ ಸುಧಾರಣೆ ತರಲು ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದೆ. ಅದರಲ್ಲಿ ಆಟಗಾರರು ಮೈದಾನದಲ್ಲಿ ಹಿಂಸಾತ್ಮಕ ವರ್ತನೆ ತೋರಿದರೆ ಅವರನ್ನು ಮೈದಾನದಿಂದ ಹೊರ ಹಾಕಲು ಅಂಪಾಯರ್ ಗಳಿಗೆ ಅಧಿಕಾರ ನೀಡುವುದೂ ಸೇರಿದೆ.

ಇದರ ಜತೆಗೆ ಬ್ಯಾಟ್ ನ ಗಾತ್ರ ಎಷ್ಟಿರಬೇಕು ಎನ್ನುವುದರ ಬಗ್ಗೆಯೂ ಹಲವು ನಿಯಮಾವಳಿಗಳನ್ನು ಶಿಫಾರಸ್ಸು ಮಾಡಿದೆ. ಒಂದು ವೇಳೆ ಐಸಿಸಿ ಕಾರ್ಯಕಾರಿ ಸಮಿತಿ ಇದನ್ನು ಅನುಮೋದಿಸಿದರೆ ಮುಂದಿನ ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ಅನಿಲ್ ಕುಂಬ್ಳೆಗೆ ನಾಯಕ ಕೊಹ್ಲಿ ಬೆಂಬಲವೂ ಇಲ್ಲವಾಯಿತೇ?!