Select Your Language

Notifications

webdunia
webdunia
webdunia
webdunia

‘ತಂಡದಲ್ಲಿ ಅನಿಲ್ ಕುಂಬ್ಳೆ ಮೇಲಧಿಕಾರಿಯಾಗಲು ಬಯಸಿದ್ದರು’

‘ತಂಡದಲ್ಲಿ ಅನಿಲ್ ಕುಂಬ್ಳೆ ಮೇಲಧಿಕಾರಿಯಾಗಲು ಬಯಸಿದ್ದರು’
Mumbai , ಶನಿವಾರ, 24 ಜೂನ್ 2017 (10:26 IST)
ಮುಂಬೈ: ಮಳೆ ಬಿಟ್ಟರೂ ಹನಿ ತಪ್ಪದು ಎನ್ನುತ್ತಾರಲ್ಲ? ಹಾಗೆಯೇ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಇಷ್ಟು ದಿನ ಕಳೆದರೂ, ಅನಿಲ್ ಕುಂಬ್ಳೆ ತಂಡದಲ್ಲಿ ಹೇಗಿದ್ದರು ಎನ್ನುವದರ ಬಗ್ಗೆ ಅಂತೆ ಕಂತೆಗಳು ನಿಂತಿಲ್ಲ.

 
ಇದೀಗ ಬಿಸಿಸಿಐ ಮೂಲವೊಂದು ಮಾಧ್ಯಮವೊಂದಕ್ಕೆ ಅನಿಲ್ ಕುಂಬ್ಳೆ ಎಲ್ಲಾ ವಿಷಯದಲ್ಲೂ ತಮ್ಮದೇ ಅಂತಿಮ ತೀರ್ಮಾನವಾಗಿರಬೇಕು ಎನ್ನುವಂತಿದ್ದರು. ಅಲ್ಲದೆ, ಮೇಲಧಿಕಾರಿಯಂತೆ ವರ್ತಿಸುತ್ತಿದ್ದರು. ಕೊಹ್ಲಿಯನ್ನೇ ಎಲ್ಲದಕ್ಕೂ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದಿರುವುದಾಗಿ ವರದಿಯಾಗಿದೆ.

ತಂಡದ ಆಯ್ಕೆ ವಿಷಯ ಗಂಗೂಲಿ, ದ್ರಾವಿಡ್, ಧೋನಿ ಕಾಲದಲ್ಲೂ ನಾಯಕರದ್ದೇ ಅಂತಿಮ ತೀರ್ಮಾನವಾಗಿರುತ್ತಿತ್ತು. ಅದುವೇ ಕೊಹ್ಲಿ ಕಾಲದಲ್ಲೂ ಮುಂದುವರಿದಿತ್ತು. ಆದರೆ ಕುಂಬ್ಳೆ ತಾವೇ ಅಂತಿಮ ಬಳಗದ ಆಯ್ಕೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದರು.

ಅವರು ನಾಯಕನಿಗೂ ಬೆಲೆ ಕೊಡದೆ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಅಲ್ಲದೆ, ಆಟಗಾರರ ಜತೆ ಕಠಿಣವಾಗಿ ನಡೆದುಕೊಳ್ಳುತ್ತಿದ್ದರು. ಇದು ಟೀಂ ಇಂಡಿಯಾ ಆಟಗಾರರು ಮಾತ್ರವಲ್ಲ, ಅವರ ಜತೆ ಐಪಿಎಲ್ ಆಡಿದವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಲ್ಲದೆ ತಮ್ಮ ನಡುವಳಿಕೆಯನ್ನು ಅವರು ಒಪ್ಪುತ್ತಿರಲಿಲ್ಲ. ಏನೇ ತಪ್ಪಾಗಿದ್ದರೂ ಆಟಗಾರರಿಂದ ಎನ್ನುತ್ತಿದ್ದರು. ಇದೇ ಕಾರಣಕ್ಕೆ ಆಟಗಾರರಲ್ಲಿ ಅವರ ಬಗ್ಗೆ ಅಸಮಾಧಾನ ಮೂಡಲು ಶುರುವಾಯ್ತು. ಬಿಸಿಸಿಐನೊಂದಿಗೂ ಅವರ ನಡವಳಿಕೆ ಇದೇ ರೀತಿ ಕಡ್ಡಿ ಮುರಿದಂತೆ ಇರುತ್ತಿತ್ತು ಎಂದು ಬಿಸಿಸಿಐ ಮೂಲಗಳು ಮಾಧ್ಯಮವೊಂದಕ್ಕೆ ಹೇಳಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭವಿಷ್ಯದ ಕುಡಿಗೆ ಧೋನಿ ಕ್ರಿಕೆಟ್ ಪಾಠ