Select Your Language

Notifications

webdunia
webdunia
webdunia
webdunia

ಭವಿಷ್ಯದ ಕುಡಿಗೆ ಧೋನಿ ಕ್ರಿಕೆಟ್ ಪಾಠ

ಭವಿಷ್ಯದ ಕುಡಿಗೆ ಧೋನಿ ಕ್ರಿಕೆಟ್ ಪಾಠ
NewDelhi , ಶನಿವಾರ, 24 ಜೂನ್ 2017 (09:56 IST)
ನವದೆಹಲಿ: ಧೋನಿ ಇನ್ನು ಹೆಚ್ಚು ವರ್ಷ ಕ್ರಿಕೆಟ್ ಆಡಲಾರರು. ಹೀಗಾಗಿ ಹೋಗುವ ಮೊದಲು ತಮ್ಮ ಭವಿಷ್ಯದ ಕುಡಿಗೆ ತಕ್ಕ ತರಬೇತಿ ನೀಡಿಯೇ ಅವರು ಸಾಗುತ್ತಿದ್ದಾರೆ. 

 
ಏಕದಿನ ಸರಣಿ ಆಡಲು ವೆಸ್ಟ್ ಇಂಡೀಸ್ ಗೆ ತೆರಳಿರುವ ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಕೂಡಾ ಒಬ್ಬರು. ಇವರನ್ನು ಭವಿಷ್ಯದ ಧೋನಿಯೆಂದೇ ಬಣ್ಣಿಸಲಾಗುತ್ತಿದೆ. ಬಾಯ್ಮಾತಲ್ಲಿ ಹಾಗೆ ಹೇಳಿದರೆ ಸಾಕೇ? ಹಾಗಾಗಿ ಅದಕ್ಕೆ ತಯಾರಿಯನ್ನೂ ಅವರು ಮಾಡಿಸುತ್ತಿದ್ದಾರೆ.

ಅಭ್ಯಾಸ ಸಮಯದಲ್ಲಿ ರಿಷಬ್ ಪಂತ್ ಕಡೆಗೆ ವಿಶೇಷ ಗಮನ ನೀಡುತ್ತಿರುವ ಧೋನಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗೆ ತಕ್ಕ ತರಬೇತಿ ನೀಡುತ್ತಿದ್ದಾರೆ. 35 ವರ್ಷದ ಧೋನಿ 19 ವರ್ಷದ ಈ ಯುವ ಆಟಗಾರನನ್ನು ಚೆನ್ನಾಗಿಯೇ ತಯಾರು ಮಾಡುತ್ತಿದ್ದಾರೆ. ಈ ಮೂಲಕ ತಾವು ನಿವೃತ್ತಿಯಾಗುವ ಮೊದಲು ಭಾರತ ತಂಡಕ್ಕೆ ಉತ್ತಮ ಆಟಗಾರನನ್ನು ಕೊಡುಗೆಯಾಗಿ ನೀಡಿಯೇ ಸಾಗುವ ಇರಾದೆಯಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ಗೆ ಕಾಲಿಟ್ಟ ಗಳಿಗೆಯಲ್ಲೇ ಟೀಂ ಇಂಡಿಯಾಗೆ ನಿರಾಸೆ