ಕೆಟ್ಟ ಬ್ಯಾಟಿಂಗ್ ನಿರ್ವಹಣೆಯಿಂದಾಗಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಟ್ವೆಂಟಿ20 ಪಂದ್ಯದಲ್ಲಿ ಹಿನಾಯ ಸೋಲನ್ನು ಅನುಭವಿಸಿತು, ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ನಮ್ಮ ಪರವಾಗಿದ್ದ ವಿಷಯವೆಂದರೆ, ಟಾಸ್ ಗೆದ್ದಿರುವುದು ಮಾತ್ರ. ಉಳಿದ ತಮ್ಮ ಯೋಜನೆ ತಲೆಕೆಳಗಾಗಿದೆ ಎಂದು ಧೋನಿ ಅವಲತ್ತುಕೊಂಡಿದ್ದಾರೆ.
ನಮ್ಮ ತಂಡದಲ್ಲಿ 11 ಮಂದಿ ಇದ್ದೆವು. ಎಲ್ಲರ ಹೆಗಲಿನ ಮೇಲೆ ಗೆಲುವಿನ ಜವಾಬ್ದಾರಿಯಿತ್ತು. ಆದರೆ ಯಾರೋಬ್ಬನೂ ಸಫಲರಾಗಲಿಲ್ಲ ಎಂದು ಧೋನಿ ಹೇಳಿದ್ದಾರೆ.
ಯುವರಾಜ್ ಅನುಪಸ್ಥಿತಿ ಭಾರತ ತಂಡದ ಸೋಲಿಗೆ ಕಾರಣವಾಗಿತ್ತು ಎಂಬುವುದನ್ನು ಧೋನಿ ನಿರಾಕರಿಸಿದರು. ಆದರೆ ಅವರು ತಂಡದಲ್ಲಿ ಸೇರದೇ ಇದ್ದದ್ದು ನಷ್ಟವಾಗಿದೆ. ಅವರು ಭಾರತೀಯ ಟ್ವೆಂಟಿ20 ತಂಡದ ಪ್ರಮುಖ ಸದಸ್ಯ ಎಂದು ವಿವರಿಸಿದರು.
ಸಚಿನ್ ಅವರು ಕೊನೆಯ ಸಂದರ್ಭದಲ್ಲಿ ತಂಡದಿಂದ ಹೊರಗುಳಿದಿರುವುದರ ಬಗ್ಗೆ ಸ್ಪಷ್ಟನೆ ನೀಡಿದ ಧೋನಿ, ಸಚಿನ್ ಹಿರಿಯ ಆಟಗಾರರು. ಅವರಿಗೆ ಯಾವಗ ಬೇಕಾದರೂ ತಂಡದಿಂದ ಹೊರಗುಳಿಯುವ ಸ್ವತಂತ್ರವಿದೆ. ನಾನು ಸಚಿನ್ ಅವರಲ್ಲಿ ಆಡುತ್ತಿರಾ ಎಂದು ಕೇಳಿದೆ. ಅವರು ವಿಶ್ರಾಂತಿ ಪಡೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದರಿಂದಾಗಿ ಅವರು ತಂಡದಿಂದ ಹೊರಗುಳಿಯಲ್ಪಟ್ಟಿದ್ದರು ಎಂದು ಹೇಳಿದರು.