ಲಂಚ್ ವಿರಾಮದ ನಂತರ ವರ್ನಾಪುರಾ ಹಾಗೂ ಜಯವರ್ಧನೆ ಜೋಡಿಯನ್ನು ಬೇರ್ಪಡಿಸಲು ವಿರೇಂದ್ರ್ ಸೆಹ್ವಾಗ್ ಅವರನ್ನು ದಾಳಿಗಿಳಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಹರ್ಬಜನ್ ಅವರನ್ನು ದಾಳಿಗಿಳಿಸಿದ ತಂಡದ ನಾಯಕ ಅನಿಲ್ ಕುಂಬ್ಳೆ ಯಶಸ್ವಿಯಾದರು
ನಾಯಕ ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಸದುಪಯೋಗಪಡಿಸಿಕೊಂಡು ವರ್ನಾಪುರಾ ಅವರ ವಿಕೆಟ್‌ನ್ನು ಕಬಳಿಸುವುದರ ಮೂಲಕ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದರು.
ನಂತರ ಬಂದ ಸಮರವೀರಾ ಜಯವರ್ಧನೆಗೆ ಉತ್ತಮ ಬೆಂಬಲ ನೀಡಿ 94 ರನ್‌ಗಳ ಜೊತೆಯಾಟ ಆಡಿ 97 ಬೌಲ್‌ಗಳಲ್ಲಿ 53ರನ್‌ಗಳಿಸಿದರು.ತಂಡದ ನಾಯಕ ಜಯವರ್ಧನೆ 220 ಬೌಲ್‌ಗಳನ್ನು ಎದುರಿಸಿ 109 ರನ್ ಬಾರಿಸಿದರು.
ಟೀ ವಿರಾಮದ ವೇಳೆಗೆ ಶ್ರೀಲಂಕಾ ತಂಡ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 88 ಓವರ್‌ಗಳಲ್ಲಿ 311ರನ್‌ಗಳಿಗೆ ಮುಕ್ತಾಯವಾಗಿತ್ತು.