Publish Date: Sat, 24 Dec 2016 (08:29 IST)
Updated Date: Sat, 24 Dec 2016 (08:31 IST)
ಮುಂಬೈ: ಒಂದು ಕಾಲದಲ್ಲಿ ತಾನೇ ಕ್ಯಾನ್ಸರ್ ಗೆ ತುತ್ತಾಗಿ ಕಠಿಣ ದಿನಗಳನ್ನು ಕಳೆದಿದ್ದ ಯುವರಾಜ್ ಸಿಂಗ್ ಗೆ ಈ ರೋಗಿಗಳ ನೋವೇನೆಂದು ಚೆನ್ನಾಗಿ ಗೊತ್ತು. ಹಾಗಾಗಿ ಅಂತಹ ರೋಗಿಗಳೊಂದಿಗೆ ಕಳೆದ ಕ್ಷಣಗಳಲ್ಲಿ ಅವರ ಮೊಗದಲ್ಲೊಂದು ನಗು ತರಿಸಲು ಈ ಕ್ರಿಕೆಟಿಗ ಪ್ರಯತ್ನ ನಡೆಸಿದರು.
ಕ್ರಿಸ್ ಮಸ್ ಗೆ ಒಂದು ದಿನ ಮುಂಚೆ ಮುಂಬೈನ ಚೈಲ್ಡ್ ಕೇರ್ ಸೆಂಟರ್ ಒಂದಕ್ಕೆ ಯುವರಾಜ್ ಸಿಂಗ್ ಬಂದಿದ್ದರು. ಇಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿದ್ದಾರೆ. ಇವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆದಿದ್ದಷ್ಟೇ ಅಲ್ಲದೆ, ತಮ್ಮ ಫ್ಯಾಷನ್ ಮಳಿಗೆ ವೈಡಬ್ಲ್ಯುಸಿ ವತಿಯಿಂದ ವಿಶೇಷ ಗಿಫ್ಟ್ ನೀಡಿ ಸಂಭ್ರಮಿಸಿದರು.
ಇಲ್ಲಿ ಸುಮಾರು 30 ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳಿದ್ದಾರೆ. ಅವರ ಜತೆಗೊಂದಿಷ್ಟು ಕಾಲ ಕಳೆದು ಅವರನ್ನು ನಗಿಸಿ, ಕ್ರಿಸ್ ಮಸ್ ಹಬ್ಬವನ್ನು ಅರ್ಥಪೂರ್ಣವಾಗಿ ಕಳೆದರು ಯುವಿ. ಮಕ್ಕಳೂ ಯುವಿ ಜತೆ ಕಾಲ ಕಳೆದಿದ್ದು, ತುಂಬಾ ಸಂತಸವಾಗಿದೆಯೆಂದು ಹೇಳಿಕೊಂಡಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ