Webdunia - Bharat's app for daily news and videos

Install App

Yashasvi Jaiswal: ಐಸಿಸಿ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್

Krishnaveni K
ಮಂಗಳವಾರ, 12 ಮಾರ್ಚ್ 2024 (17:02 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಐಸಿಸಿ ಮಾಸಿಕ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದಕ್ಕೆ ಬಿಸಿಸಿಐ, ಫ್ಯಾನ್ಸ್ ಅವರನ್ನು ಅಭಿನಂದಿಸುತ್ತಿದೆ.

ಐಸಿಸಿ ಪ್ರತೀ ತಿಂಗಳೂ ಆಯಾ ತಿಂಗಳು ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡುತ್ತದೆ. ಈ ಬಾರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಎರಡು ದ್ವಿಶತಕ ಸಿಡಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ ಕೂಡಾ ರೇಸ್ ನಲ್ಲಿದ್ದರು. ಅವರ ಜೊತೆಗೆ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್, ಶ್ರೀಲಂಕಾದ ಪತುಮ್ ನಿಸ್ಸಂಕಾ ಕೂಡಾ ರೇಸ್ ನಲ್ಲಿದ್ದರು.

ಜೈಸ್ವಾಲ್ ಇಂಗ್ಲೆಂಡ್ ಸರಣಿಯಲ್ಲಿ 700 ಪ್ಲಸ್ ರನ್ ಗಳಿಸಿದ್ದರು. ಹಲವು ದಾಖಲೆಗಳನ್ನೂ ಮುರಿದಿದ್ದರು. ಇಂಗ್ಲೆಂಡ್ ಬಾಝ್ ಬಾಲ್ ಟೆಕ್ನಿಕ್ ಗೆ ಜೈಸ್ವಾಲ್ ತಮ್ಮದೇ ರೀತಿಯಲ್ಲಿ ಠಕ್ಕರ್ ಕೊಟ್ಟಿದ್ದರು. ಅವರ ಈ ಸಾಧನೆಗೆ ಈಗ ಐಸಿಸಿ ಮಾಸಿಕ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಿದೆ.

‘ಈ ಪ್ರಶಸ್ತಿ ಪಡೆಯಲು ನನಗೆ ತೀವ್ರ ಸಂತಸವಾಗುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಈ ಪ್ರಶಸ್ತಿ ಪಡೆಯಲು ಸಾಧ‍್ಯವಾಗುತ್ತದೆ ಎಂದು ನಂಬಿದ್ದೇನೆ. ಇದು ನನ್ನ ವೃತ್ತಿ ಜೀವನದ ಅಮೂಲ್ಯ ಸರಣಿ. ನಾನು ಆಡಿದ ರೀತಿ ಮತ್ತು ತಂಡ 4-1 ಅಂತರದಿಂದ ಗೆಲ್ಲಲು ಸಾಧ‍್ಯವಾಗಿದ್ದಕ್ಕೆ ಖುಷಿಯಿದೆ’ ಎಂದು ಪ್ರಶಸ್ತಿ ಗೆದ್ದ ಬಳಿಕ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಇತಿಹಾಸ ನಿರ್ಮಿಸಲು ಹೊರಟ ದಕ್ಷಿಣ ಆಫ್ರಿಕಾ

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

ಮುಂದಿನ ಸುದ್ದಿ
Show comments