Webdunia - Bharat's app for daily news and videos

Install App

ಕ್ಯಾಪ್ಟನ್ ರೋಹಿತ್ ಶರ್ಮಾ ನಂಗೆ ಬೈತಾರೆ! ಯಶಸ್ವಿ ಜೈಸ್ವಾಲ್ ವಿಡಿಯೋ ವೈರಲ್

Krishnaveni K
ಸೋಮವಾರ, 26 ಫೆಬ್ರವರಿ 2024 (08:50 IST)
ರಾಂಚಿ: ಟೀಂ ಇಂಡಿಯಾ ಯಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ ಅವರ ಅಭಿಮಾನಿಗಳ ಜೊತೆ ಸಂವಾದ ನಡೆಸುವ ಫನ್ನಿ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಎರಡೆರಡು ದ್ವಿಶತಕದೊಂದಿಗೆ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಹೀಗಾಗಿ ಜೈಸ್ವಾಲ್ ಈಗ ಕ್ರಿಕೆಟ್ ಪ್ರಿಯರ ಕಣ್ಮಣಿಯಾಗಿದ್ದಾರೆ. ಕೇವಲ 22 ವರ್ಷದ ಹಾಲುಗಲ್ಲದ ಈ ಯುವ ಪ್ರತಿಭೆಯನ್ನು ಈಗ ಅಭಿಮಾನಿಗಳು ಹೋದಲ್ಲೆಲ್ಲಾ ಮುತ್ತಿಗೆ ಹಾಕುತ್ತಿದ್ದಾರೆ.

ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಪೆವಿಲಿಯನ್ ನ ಬಾಲ್ಕನಿಯಿಂದಲೇ ಜೈಸ್ವಾಲ್ ಅಭಿಮಾನಿಗಳೊಂದಿಗೆ ಮಾತನಾಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಜೈಸ್ವಾಲ್ ಮಾತನಾಡಿಸಿದ ಅಭಿಮಾನಿಗಳು, ಸ್ವಲ್ಪ ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಕರೆಯಿರಿ ನಾವು ನೋಡಬೇಕು ಎಂದಿದ್ದಾರೆ.

ಆಗ ಜೈಸ್ವಾಲ್, ಇಲ್ಲ ನನಗೆ ಭಯವಾಗುತ್ತದೆ. ರೋಹಿತ್ ಭಾಯಿ ನನಗೆ ಬೈತಾರೆ ಎಂದು ಅಮಾಯಕರಾಗಿ ಉತ್ತರಿಸಿದ್ದಾರೆ. ಆಗ ಅಭಿಮಾನಿಗಳು ನಿಮಗೂ ಬೈತಾರಾ ಎಂದು ಕೇಳಿದ್ದಾರೆ. ಹೌದು, ನನಗೆ ಭಯವಾಗುತ್ತದೆ ಎಂದಿದ್ದಾರೆ.

ರೋಹಿತ್ ಶರ್ಮಾ ಮತ್ತು ಜೈಸ್ವಾಲ್ ನಡುವಿನ ಸಂಬಂಧ ಎಲ್ಲರಿಗೂ ಗೊತ್ತು. ಜೈಸ್ವಾಲ್ ಗೆ ರೋಹಿತ್ ಶರ್ಮಾ ಎಂದರೆ ಗಾಡ್ ಫಾದರ್ ಇದ್ದಂತೆ. ಹೀಗಾಗಿ ಜೈಸ್ವಾಲ್ ಕೂಡಾ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಾರೆ. ರೋಹಿತ್ ಶರ್ಮಾ ಯುವ ಕ್ರಿಕೆಟಿಗರನ್ನು ತಮ್ಮ ಸ್ವಂತ ಸಹೋದರರಂತೆ ನಡೆಸಿಕೊಳ್ಳುತ್ತಾರೆ. ಅವರು ತಪ್ಪು ಮಾಡಿದಾಗ ನೇರವಾಗಿ ಬೈದೇ ಬಿಡುತ್ತಾರೆ. ಆದರೆ ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳುವ ಜಾಯಮಾನದವರಲ್ಲ. ಹೀಗಾಗಿ ಕ್ರಿಕೆಟಿಗರಿಗೂ ಅವರ ಬೈಗುಳವೂ ಖುಷಿ ಕೊಡುತ್ತದೆ. ಈಗ ಜೈಸ್ವಾಲ್ ಉತ್ತರ ನೆಟ್ಟಿಗರಿಗೆ ನಗು ತರಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಮುಂದಿನ ಸುದ್ದಿ
Show comments