Publish Date: Wed, 07 Jun 2023 (08:10 IST)
Updated Date: Wed, 07 Jun 2023 (08:43 IST)
ದಿ ಓವಲ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ.
ಕಳೆದ ಚೊಚ್ಚಲ ಆವೃತ್ತಿಯಲ್ಲೂ ಭಾರತ ಫೈನಲ್ ಗೇರಿತ್ತು. ಆದರೆ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಬಳಗ ಸೋತಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಅದೃಷ್ಟ ಪರೀಕ್ಷೆಗಿಳಿದಿದೆ. ಟೀಂ ಇಂಡಿಯಾ ಕೆಲವು ವರ್ಷಗಳಿಂದ ಐಸಿಸಿ ಪ್ರಶಸ್ತಿಯಲ್ಲಿ ಬರಗಾಲ ಅನುಭವಿಸುತ್ತಿದೆ. ಹೀಗಾಗಿ ಈ ಬಾರಿ ಗೆಲ್ಲುವ ತವಕದಲ್ಲಿದೆ.
ಭಾರತ ತಂಡದಲ್ಲಿ ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಬಲವಿದೆ. ಆದರೆ ಆಸೀಸ್ ಇಂಗ್ಲೆಂಡ್ ನ ವೇಗದ ಪಿಚ್ ನಲ್ಲಿ ಕಠಿಣ ಎದುರಾಳಿಯಾಗಬಹುದು. ಪ್ಯಾಟ್ ಕ್ಯುಮಿನ್ಸ್ ನೇತೃತ್ವದ ಆಸೀಸ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಬ್ಯಾಟಿಂಗ್ ನಲ್ಲಿ ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜ, ಲಬುಶೇನ್, ಡೇವಿಡ್ ವಾನರ್ ರಂತಹ ಘಟಾನುಘಟಿಗಳ ಬಲವಿದೆ. ಹೀಗಾಗಿ ಈ ಪಂದ್ಯ ಟೀಂ ಇಂಡಿಯಾಕ್ಕೆ ಕಠಿಣ ಸವಾಲಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.