Daily Horoscope
✕

WPL 2026: ಅದೇ ಎದುರಾಳಿ.. ಎರಡನೇ ಸಲ ಕಪ್ ಗೆಲ್ಲುತ್ತಾರಾ ಆರ್ ಸಿಬಿ ಮಹಿಳೆಯರು

Krishnaveni K
ಗುರುವಾರ, 5 ಫೆಬ್ರವರಿ 2026 (08:48 IST)
Photo Credit: X
ವಡೋದರಾ: ಡಬ್ಲ್ಯುಪಿಎಲ್ 2026 ಬಹುನಿರೀಕ್ಷಿತ ಫೈನಲ್ ಪಂದ್ಯ ಇಂದು ನಡೆಯಲಿದೆ. ಆರ್ ಸಿಬಿ ಈಗಾಗಲೇ ಫೈನಲ್ ಗೇರಿದ್ದು 2024 ರ ಅದೇ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಂತಿಮ ಹೋರಾಟ ನಡೆಸಲಿದೆ.

ಇದುವರೆಗೆ ಮೂರು ಡಬ್ಲ್ಯುಪಿಎಲ್ ಆವೃತ್ತಿ ನಡೆದಿದೆ. ಈ ಪೈಕಿ ಎರಡು ಬಾರಿ ಮುಂಬೈ ಒಮ್ಮೆ ಆರ್ ಸಿಬಿ ಕಪ್ ಗೆದ್ದಿದೆ. ಆರ್ ಸಿಬಿ ಪುರುಷರ ತಂಡವೂ ಕಪ್ ಗೆದ್ದಿರಲಿಲ್ಲ. ಅದಕ್ಕೆ ಮೊದಲೇ 2024 ರಲ್ಲಿ ಮೊದಲ ಬಾರಿಗೆ ಡಬ್ಲ್ಯುಪಿಎಲ್ ಕಪ್ ಗೆದ್ದು ಮಹಿಳೆಯರು ಇತಿಹಾಸ ಬರೆದಿದ್ದರು.

ಆದರೆ ಕಳೆದ ಆವೃತ್ತಿಯಲ್ಲಿ ಮತ್ತೆ ತಂಡ ಸತತ ಸೋಲಿನಿಂದ ಸೋತು ಹೋಗಿತ್ತು. ಈ ಬಾರಿ ಮತ್ತೆ ಆರ್ ಸಿಬಿ ಫೈನಲ್ ಗೇರಿದೆ. ಕಳೆದ ಬಾರಿಗೆ ಹೋಲಿಸಿದರೆ ಆರ್ ಸಿಬಿ ಈಗ ಬಲಿಷ್ಠ ತಂಡವಾಗಿದೆ. ಲೀಗ್ ಪಂದ್ಯಗಳಲ್ಲೇ ಅತೀ ಹೆಚ್ಚು ಗೆಲುವು ಸಾಧಿಸಿ ನೇರ ಫೈನಲ್ ಗೇರಿದ ಸಾಧನೆ ಮಾಡಿದೆ. ಹೀಗಾಗಿ ಎರಡನೇ ಸಲ ಕಪ್ ನಮ್ದು ಎನ್ನುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕರೂ ಅಚ್ಚರಿಯಿಲ್ಲ.

ಆದರೆ ಡೆಲ್ಲಿ ಕೂಡಾ ಇದು ಎರಡನೇ ಬಾರಿಗೆ ಫೈನಲ್ ಗೇರಿದೆ. ಕಳೆದ ಬಾರಿ ಇದೇ ಆರ್ ಸಿಬಿ ವಿರುದ್ಧ ಫೈನಲ್ ನಲ್ಲಿ ಸೋತಿತ್ತು. ಈ ಬಾರಿ ಆರಂಭದಲ್ಲಿ ಲೀಗ್ ಹಂತದ ಪಂದ್ಯಗಳಲ್ಲಿ ಪೇಲವ ಪ್ರದರ್ಶನ ತೋರಿದ್ದರೂ ನಂತರ ಸಿಡಿದೆದ್ದಿದೆ. ಶಫಾಲಿ ವರ್ಮ, ಜೆಮಿಮಾ ರೊಡ್ರಿಗಸ್, ಲಿಝೆಲ್ಲೇ ಲೀ, ಲೌರಾ ತಂಡದ ಬ್ಯಾಟಿಂಗ್ ಶಕ್ತಿಗಳು. ಲೀಗ್ ಹಂತದಲ್ಲಿ ಆರ್ ಸಿಬಿ ವಿರುದ್ಧ ಸತತ ಸೋಲು ಕಂಡಿರುವ ಡೆಲ್ಲಿಗೆ ಈಗ ಫೈನಲ್ ನಲ್ಲಿ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕವಿದೆ. ಡೆಲ್ಲಿ ಕೂಡಾ ಇದುವರೆಗೆ ಮಹಿಳೆಯರು ಮಾತ್ರವಲ್ಲ, ಪುರುಷರ ತಂಡವೂ ಕಪ್ ಗೆದ್ದಿಲ್ಲ. ಹೀಗಾಗಿ ಕಪ್ ಗೆಲ್ಲುವ ಛಲ ಡೆಲ್ಲಿಗೂ ಪ್ರಬಲವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದಾಗಿದೆ.  ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

IND vs NZ: ಕ್ಯಾಚ್ ಹಿಡಿದವ ನೀನೇ, ನಿಂಗೇ ಗೊತ್ತಾಗಿಲ್ವಾ: ರಿಷಭ‍್ ಪಂತ್ ಹೆಲ್ಮೆಟ್ ತೆಗೆದು ಅಲ್ಲಾಡಿಸಿದ್ರು ಶುಭಮನ್ ಗಿಲ್ Video

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments