ಡಬ್ಲ್ಯುಪಿಎಲ್ 2024: ಆರ್ ಸಿಬಿ ಕ್ವೀನ್ ಸ್ಮೃತಿ ಮಂಧಾನ ಸೌಂದರ್ಯದ ಗುಟ್ಟು ರಟ್ಟು

Krishnaveni K
ಬುಧವಾರ, 6 ಮಾರ್ಚ್ 2024 (10:46 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ, ಭಾರತ ಕ್ರಿಕೆಟ್ ತಂಡದ ಕ್ವೀನ್ ಎಂದೇ ಕರೆಯಿಸಿಕೊಳ್ಳುವ ಸ್ಮೃತಿ ಮಂಧಾನ ಆಟದಲ್ಲಿ ಎಷ್ಟು ಜನಪ್ರಿಯರೋ ಜಗತ್ತಿನ ಅತ್ಯಂತ ಸುಂದರ ಕ್ರಿಕೆಟ್ ಆಟಗಾರ್ತಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.

ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರನ್ನು ರಂಜಿಸುವ ಸ್ಮೃತಿ ಮಂಧಾನ ತಮ್ಮ ದೈನಂದಿನ ಜೀವನದಲ್ಲಿ ತಮ್ಮ ಆಹಾರ, ಫಿಟ್ನೆಸ್ ಕಡೆಗೆ ಅಷ್ಟೇ ಗಮನ ಕೊಡುತ್ತಾರೆ. ಇದೇ ಕಾರಣಕ್ಕೆ ಅವರು ಅಷ್ಟೊಂದು ಫಿಟ್ ಆಂಡ್ ಬ್ಯೂಟಿಫುಲ್ ಆಗಿರುತ್ತಾರೆ.

ಕ್ರಿಕೆಟ್ ಇಲ್ಲದಿದ್ದಾಗಲೂ ತನ್ನ ಕಠಿಣ ಅಭ್ಯಾಸ, ಡಯಟ್ ಮಾತ್ರ ಎಂದಿಗೂ ಬಿಡುವುದಿಲ್ಲ ಮಂಧಾನ. ದೈಹಿಕವಾಗಿ ಫಿಟ್ ಆಗಿರಬೇಕೆಂದರೆ ಪೋಷಕಾಂಶಯುಕ್ತ ಆಹಾರ ಸೇವಿಸುವುದು ಮುಖ್ಯ ಎಂದು ಅವರು ನಂಬುತ್ತಾರೆ. ಮೈದಾನದಲ್ಲಿ ಸುಡು ಬಿಸಿಲಿನಲ್ಲಿ ಆಡುವಾಗ ತಮ್ಮ ಮುಖದ ಕಾಂತಿ, ಚರ್ಮ ಪೇಲವವಾಗದಂತೆ ಯಾವಾಗಲೂ ಸನ್ ಸ್ಕ್ರೀನ್ ಬಳಸಲು ಮರೆಯಲ್ಲ. ಅದರ ಹೊರತಾಗಿ ಯಾವುದೇ ಮೇಕಪ್ ಮಾಡಿಕೊಳ್ಳಲ್ಲ. ಪ್ರತೀ ದಿನವೂ ಜಿಮ್ ತಪ್ಪಿಸುವುದಿಲ್ಲ.

ಕಟ್ಟುನಿಟ್ಟಿನ ಆಹಾರ ಸೇವನೆ ಮೂಲಕ ದೇಹಕ್ಕೆ ಸಾಕಷ್ಟು ಪೋಷಕಾಂಶ ಸೇರುವಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಪ್ರತಿನಿತ್ಯ ವರ್ಕೌಟ್ ತಪ್ಪಿಸುವುದಿಲ್ಲ. ಪ್ರತೀ ಪಂದ್ಯಕ್ಕೆ ಮುನ್ನ ಜಿಮ್ ಮಾಡದೇ ಕಣಕ್ಕಿಳಿಯಲ್ಲ. ಜಿಮ್ ನಲ್ಲಿ ರನ್ನಿಂಗ್ ನಿಂದ ಹಿಡಿದು ಭಾರ ಎತ್ತುವವರೆಗೆ ಎಲ್ಲಾ ರೀತಿಯ ಕಸರತ್ತುಗಳನ್ನೂ ಮಾಡುತ್ತಾರೆ. ಇದರಿಂದಾಗಿಯೇ ತಾವು ಫಿಟ್ ಆಗಿರುವುದು ಎಂದು ಸ್ಮೃತಿ ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments