Womens World cup:ತವರಿನಲ್ಲಿ ಇತಿಹಾಸ ನಿರ್ಮಿಸುವ ತವಕದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ

Sampriya
ಭಾನುವಾರ, 2 ನವೆಂಬರ್ 2025 (10:03 IST)
Photo Credit X
ನವಿ ಮುಂಬೈ: ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ಸೆಣಸಲಿವೆ.

ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಫೈನಲ್ ತಲುಪದ ಕಾರಣ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯರ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ.

ಉಭಯ ತಂಡಗಳು ತಮ್ಮ ಮೊದಲ ವಿಶ್ವ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. ಭಾರತ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಹಾಗೂ ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ.

45,300 ಪ್ರೇಕ್ಷಕರ ಸಾಮರ್ಥ್ಯದ ಡಿ.ವೈ. ಪಾಟೀಲ್ ಸ್ಟೇಡಿಯಂ ಪ್ರಸಕ್ತ ಪಂದ್ಯಾವಳಿಯ ವೇಳೆ ಭಾರತದ ಪಾಲಿಗೆ ಅದೃಷ್ಟದ ಮೈದಾನವಾಗಿತ್ತು. ಗ್ರೂಪ್ ಹಂತದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ದಾಖಲಿಸಿದ್ದ ಭಾರತವು ಸೆಮಿ ಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಸೋಲುಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಉಭಯ ತಂಡಗಳು ತಂಡಗಳು ಅಕ್ಟೋಬರ್ 9ರಂದು ಪಂದ್ಯಾವಳಿಯ ಲೀಗ್ ಹಂತದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ದಕ್ಷಿಣ ಆಫ್ರಿಕಾವು 3 ವಿಕೆಟ್‌ ಗಳ ಅಂತರದಿಂದ ಜಯಶಾಲಿಯಾಗಿತ್ತು. ನಾಡಿನ್ ಡಿ ಕ್ಲಾರ್ಕ್ ಔಟಾಗದೇ 84 ರನ್ ಹಾಗೂ 2 ವಿಕೆಟ್‌ ಗಳನ್ನು ಉರುಳಿಸುವ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು.

ಹೆಡ್-ಟು-ಹೆಡ್ ದಾಖಲೆಯಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೇಲುಗೈ ಹೊಂದಿದ್ದು, 34 ಏಕದಿನ ಪಂದ್ಯಗಳ ಪೈಕಿ 20ರಲ್ಲಿ ಜಯ ದಾಖಲಿಸಿದೆ. 

ಭಾರತ ತಂಡವು ಈ ಹಿಂದೆ 2005 ಹಾಗೂ 2017ರಲ್ಲಿ ಫೈನಲ್‌ ಗೆ ತಲುಪಿತ್ತು. ಆದರೆ ಕ್ರಮವಾಗಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್‌ ಗೆ ತೃಪ್ತಿಪಟ್ಟುಕೊಂಡಿತ್ತು. ಪ್ರತಿಷ್ಠಿತ ಪ್ರಶಸ್ತಿಗಾಗಿ ಇದೀಗ 3ನೇ ಬಾರಿ ಪ್ರಯತ್ನಿಸಲಿದೆ.

2017 ಹಾಗೂ 2022ರಲ್ಲಿ ಸೆಮಿ ಫೈನಲ್‌ ನಲ್ಲೇ ನಿರ್ಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಚರಿತ್ರೆ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments