Webdunia - Bharat's app for daily news and videos

Install App

ರಾಹುಲ್ ದ್ರಾವಿಡ್ ಗೆ ಸಿಕ್ಕಿದ ಈ ಗೌರವ ಸಚಿನ್ ತೆಂಡುಲ್ಕರ್ ಗೆ ಇನ್ನೂ ಯಾಕೆ ಸಿಕ್ಕಿಲ್ಲ ಗೊತ್ತಾ?!

Webdunia
ಬುಧವಾರ, 4 ಜುಲೈ 2018 (08:50 IST)
ಮುಂಬೈ: ಮೊನ್ನೆಯಷ್ಟೇ ಟೀಂ ಇಂಡಿಯಾ ಮಾಜಿ ನಾಯಕ, ವಾಲ್ ರಾಹುಲ್ ದ್ರಾವಿಡ್ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇನ್ನೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಯಾಕೆ ಗೊತ್ತಾ?
 

ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ ಸುನಿಲ್ ಗವಾಸ್ಕರ್ ನಂತರ ಐಸಿಸಿಯ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದ ಐದನೇ ಭಾರತೀಯ ದ್ರಾವಿಡ್. ಆದರೆ ಕ್ರಿಕೆಟ್ ನ ಹಲವಾರು ದಾಖಲೆಗೆ ಒಡೆಯನಾಗಿರುವ ಸಚಿನ್ ಗೆ ಯಾಕೆ ಗೌರವ ಸಿಕ್ಕಿಲ್ಲ?

ನಿಯಮಗಳ ಪ್ರಕಾರ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಒಬ್ಬ ಕ್ರಿಕೆಟಿಗ ಯಾವುದೇ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿ ಐದು ವರ್ಷ ಪೂರ್ಣವಾಗಬೇಕು. ಆದರೆ ಸಚಿನ್ ತೆಂಡುಲ್ಕರ್ 2013 ರ ನವಂಬರ್ ನಲ್ಲಿ ನಿವೃತ್ತಿಯಾದವರು. ಹೀಗಾಗಿ ಐದು ವರ್ಷದ ಅವಧಿ ಪೂರ್ಣಗೊಳ್ಳಲು ಇನ್ನೂ ನಾಲ್ಕು ತಿಂಗಳು ಕಳೆಯಬೇಕು.

ಇದೇ ಕಾರಣಕ್ಕೆ ಸಚಿನ್ ಗೆ ಇನ್ನೂ ಆ ಗೌರವ ಸಿಕ್ಕಿಲ್ಲ. ಆದರೆ ತಮ್ಮ ಸಹ ಕ್ರಿಕೆಟಿಗನಾಗಿದ್ದ ದ್ರಾವಿಡ್ ಈ ಸಾಲಿಗೆ ಸೇರಿದ್ದಕ್ಕೆ ಸಂತಸದಿಂದಲೇ ಸಚಿನ್ ಟ್ವೀಟ್ ಮಾಡಿದ್ದಾರೆ. ‘ಫೇಮ್ ಹಾಲ್ ನಲ್ಲಿ ವಾಲ್. ನಿನಗೆ ಅರ್ಹವಾದ ಗೌರವವಿದು’ ಎಂದು ಸಚಿನ್ ದ್ರಾವಿಡ್ ಗೆ ಅಭಿನಂದಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಿಟಿ ಉಷಾ ಮಗನ ಮದುವೆ ಊಟಕ್ಕೆ ಫಿದಾ ಆದ ಮೇರಿ ಕೋಮ್‌

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಭಾರತದ ವಾಲ್ 2.0 ಖ್ಯಾತಿಯ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಮುಂದಿನ ಸುದ್ದಿ
Show comments