ಐಪಿಎಲ್ 2024: ಮುಂಬೈ ಇಂಡಿಯನ್ಸ್ ಜೊತೆ ಹೋಟೆಲ್ ನಲ್ಲಿ ಯಾಕೆ ಉಳಿಯುತ್ತಿಲ್ಲ ರೋಹಿತ್ ಶರ್ಮಾ

Krishnaveni K
ಶುಕ್ರವಾರ, 19 ಏಪ್ರಿಲ್ 2024 (12:05 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ಮೇಲೆ ರೋಹಿತ್ ಶರ್ಮಾ ರಿಲ್ಯಾಕ್ಸ್ ಆಗಿದ್ದಾರೆ. ಆದರೆ ರೋಹಿತ್ ಇದೀಗ ಮುಂಬೈನಲ್ಲಿ ಪಂದ್ಯವಿದ್ದಾಗ ತನ್ನ ತಂಡದ ಜೊತೆ ಉಳಿದುಕೊಳ್ಳಲ್ಲವಂತೆ. ಅದಕ್ಕೆ ಕಾರಣವೇನೆಂದು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಪಂದ್ಯಗಳನ್ನು ತವರಿನಲ್ಲಿಯೇ ಆಡಿದೆ. ಈ ಎಲ್ಲಾ ಪಂದ್ಯಗಳಿಗೂ ರೋಹಿತ್ ತಮ್ಮ ಮನೆಯಲ್ಲೇ ಉಳಿದುಕೊಂಡು ತಂಡವನ್ನು ಕೂಡಿಕೊಂಡಿದ್ದಾರೆ. ತಂಡದ ಜೊತೆ ಹೋಟೆಲ್ ರೂಂನಲ್ಲಿ ವಾಸ್ತವ್ಯ ಹೂಡಿಲ್ಲ. ಸದ್ಯಕ್ಕೆ ನಾಯಕತ್ವದ ಹೊಣೆಯಿಲ್ಲದೇ ಇರುವುದರಿಂದ ರೋಹಿತ್ ರಿಲ್ಯಾಕ್ ಆಗಿದ್ದಾರೆ.

‘ಇತ್ತೀಚೆಗಿನ ದಿನಗಳಲ್ಲಿ ನನಗೆ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಸಾಕಷ್ಟು ಸಮಯ ಸಿಗುತ್ತಿದೆ. ಕಳೆದ ನಾಲ್ಕು ಪಂದ್ಯಗಳು ಮುಂಬೈನಲ್ಲಿ ನಡೆದಿತ್ತು. ಎಲ್ಲಾ ಪಂದ್ಯಗಳಿಗೂ ನಾನು ಮನೆಯಿಂದಲೇ ಟೀಂ ಮೀಟಿಂಗ್ ಗೆ ಒಂದು ಗಂಟೆ ಮೊದಲು ತಲುಪುವಂತೆ ಬಂದಿದ್ದೆ. ಇದು ನನಗೆ ವಿಭಿನ್ನ ಅನುಭವ ಜೊತೆಗೆ ಖುಷಿ ಕೊಡುತ್ತಿದೆ’ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ಮೇಲೆ ರೋಹಿತ್ ಶರ್ಮಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಹಾಗಿದ್ದರೂ ರೋಹಿತ್ ಈ ಟೂರ್ನಿಯಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೆಲವರು ಈಗಾಗಲೇ ಮುಂಬೈ ಇಂಡಿಯನ್ಸ್ ನಲ್ಲಿ ರೋಹಿತ್ ಗೆ ಇದೇ ಕೊನೆಯ ಐಪಿಎಲ್ ಆಗಿರಬಹುದು ಎನ್ನುತ್ತಿದ್ದಾರೆ. ಮುಂದಿನ ಐಪಿಎಲ್ ವೇಳೆಗೆ ಅವರು ಬೇರೆ ತಂಡ ಕೂಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲವೂ ಇದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಮುಂದಿನ ಸುದ್ದಿ
Show comments