Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಔಟಾದಾಗ ರವೀಂದ್ರ ಜಡೇಜಾ ಸೆಲೆಬ್ರೇಷನ್ ಮಾಡದೇ ಇದ್ದಿದ್ದು ಯಾಕೆ?!

Webdunia
ಭಾನುವಾರ, 6 ಮೇ 2018 (07:20 IST)
ಪುಣೆ: ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೆಂದರೆ ಯಾವುದೇ ಬೌಲರ್ ಗೂ ದೊಡ್ಡ ಬ್ರೇಕ್ ಇದ್ದಂತೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ ಮಾತ್ರ ಸೆಲೆಬ್ರೇಟ್ ಮಾಡದೇ ತಣ್ಣಗೆ ನಿಂತರು!

ರಾಯಲ್ ಚಾಲೆಂಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮೊದಲ ಎಸೆತಕ್ಕೇ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಔಟ್ ಮಾಡಿದರು. ಈ ಸಂದರ್ಭದಲ್ಲಿ  ಜಡೇಜಾ ಸಂಭ್ರಮಿಸಲೇ ಇಲ್ಲ. ಅತ್ತ ಕೊಹ್ಲಿ ಮಾತ್ರ ಜಡೇಜಾ ಕಡೆ ಉರಿನೋಟ ಬೀರುತ್ತಾ ಪೆವಿಲಿಯನ್ ಗೆ ಸಾಗಿದರು.

ಇದರ ಬಗ್ಗೆ ಟ್ವಿಟರ್ ನಲ್ಲಿ ಅಭಿಮಾನಿಗಳು ಜಡೇಜಾ ಕಾಲೆಳೆದಿದ್ದಾರೆ. ಹೋಗಿ ಹೋಗಿ ರಾಷ್ಟ್ರೀಯ ತಂಡದ ಕ್ಯಾಪ್ಟನ್ ನನ್ನು ಔಟ್ ಮಾಡಿ ಸೆಲೆಬ್ರೇಟ್ ಮಾಡಕ್ಕಾಗುತ್ತಾ? ಮೊದಲ ಎಸೆತಕ್ಕೇ ಕ್ಯಾಪ್ಟನ್ ನನ್ನು ಔಟ್ ಮಾಡಿದೆಯಲ್ಲಾ? ನಿನಗಿನ್ನು ಟೀಂ ಇಂಡಿಯಾ ಬಾಗಿಲು ಮುಚ್ಚೋದು ಗ್ಯಾರಂಟಿ ಎಂದು ಜಡೇಜಾ ಕಾಲೆಳೆದಿದ್ದಾರೆ.

ಇದರ ಬಗ್ಗೆ ಪಂದ್ಯದ ನಂತರ ಪ್ರತಿಕ್ರಿಯಿಸಿದ ಜಡೇಜಾ ‘ಇದು ನನ್ನ ಮೊದಲ ಬಾಲ್ ಆಗಿತ್ತು ಮತ್ತು ನಾನು ಸಂಭ್ರಮಿಸಲು ತಯಾರಾಗಿರಲೇ ಇಲ್ಲ. ವಿರಾಟ್ ವಿಕೆಟ್ ಯಾವತ್ತೂ ದೊಡ್ಡದೇ’ ಎಂದಿದ್ದಾರೆ. ಅದೇನೇ ಇರಲಿ ಟ್ವಿಟರಿಗರಿಗೆ ಮಾತ್ರ ಜಡೇಜಾ ವರ್ತನೆ ತಮಾಷೆಯ ವಸ್ತುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಭಾರತದ ವಾಲ್ 2.0 ಖ್ಯಾತಿಯ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಮುಂದಿನ ಸುದ್ದಿ
Show comments