ಸತತ ಗೆಲುವು ಕಾಣುತ್ತಿರುವ ಟೀಂ ಇಂಡಿಯಾ ಮೇಲೆ ಬೇರೆ ತಂಡಗಳಿಗೆ ಯಾಕೆ ಹೊಟ್ಟೆ ಉರಿ

Krishnaveni K
ಶುಕ್ರವಾರ, 7 ಮಾರ್ಚ್ 2025 (09:16 IST)
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸತತ ಗೆಲುವು ಕಂಡು ಫೈನಲ್ ಗೇರಿದ ಮೇಲೆ ಬೇರೆ ತಂಡಗಳಿಗೆ ಯಾಕೆ ಹೊಟ್ಟೆ ಉರಿ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.

ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಟೀಂ ಇಂಡಿಯಾ ಫೈನಲ್ ಗೇರಿದ ಮೇಲಂತೂ ಭಾರತ ಒಂದೇ ತಾಣದಲ್ಲಿ ಆಡುವ ಲಾಭ ಸಿಗುತ್ತಿದೆ ಎಂದು ಎಲ್ಲಾ ತಂಡಗಳೂ ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಿವೆ.

ಮೊದಲು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಪಸ್ವರವೆತ್ತಿದ್ದರು. ಈ ಟೂರ್ನಿಯಲ್ಲಿ ಒಂದು ತಂಡಕ್ಕೆ ಮಾತ್ರ ಲಾಭವಾಗುತ್ತಿದೆ ಎಂದರು. ಬಳಿಕ ಆಸ್ಟ್ರೇಲಿಯಾ, ಅದಾದ ಬಳಿಕ ಈಗ ದಕ್ಷಿಣ ಆಫ್ರಿಕಾವೂ ಒಂದೇ ತಾಣದಲ್ಲಿ ಆಡುವ ಲಾಭ ಭಾರತಕ್ಕೆ ಆಗುತ್ತಿದೆ ಎಂದು ಉರಿದುಕೊಂಡಿದ್ದರು.

ಚಾಂಪಿಯನ್ಸ್ ಟ್ರೋಫಿ ಆಯೋಜನೆ ಬಗ್ಗೆ ರೂಪುರೇಷೆ ಸಿದ್ಧಪಡಿಸಿಲು ಐಸಿಸಿ ಒಂದು ಸಭೆ ನಡೆಸಿತ್ತು. ಅಂದಿನಿಂದಲೂ ಪಾಕಿಸ್ತಾನಕ್ಕೆ ನಾವು ಬಿಲ್ ಕುಲ್ ಹೋಗಲ್ಲ ಎಂದು ಭಾರತ ಹೇಳುತ್ತಲೇ ಬಂದಿತ್ತು. ಹೀಗಾಗಿ ಭಾರತ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜನೆ ಮಾಡಬೇಕಾಗಬಹುದು ಎಂಬುದು ಅಂದಿನಿಂದಲೇ ಈ ಎಲ್ಲಾ ರಾಷ್ಟ್ರಗಳಿಗೂ ಮನದಟ್ಟಾಗಿರಬಹುದು.

ಒಂದು ವೇಳೆ ಭಾರತಕ್ಕೆ ಲಾಭವಾಗಲಿದೆ ಎಂದು ಲೆಕ್ಕಾಚಾರಗಳಿದ್ದರೆ ಅಂದೇ ನಮಗೂ ಪಾಕಿಸ್ತಾನದಲ್ಲಿ ಆಡಲು ಇಷ್ಟವಿಲ್ಲ, ನಾವೂ ದುಬೈನಲ್ಲೇ ಆಡುತ್ತೇವೆ ಎಂದಿದ್ದರೆ ಮುಗಿಯುತ್ತಿತ್ತು. ಆದರೆ ಆಗ ಪಾಕಿಸ್ತಾನದಲ್ಲಿ ಆಡಲು ನಮಗೆ ತೊಂದರೆಯಿಲ್ಲ, ತಾವು ಪಾಕಿಸ್ತಾನಕ್ಕೆ ಹೋಗಲೂ ರೆಡಿ ಎಂದು ಕುಣಿದಿದ್ದ ಈ ರಾಷ್ಟ್ರಗಳು ಈಗ ಭಾರತ ಫೈನಲ್ ಗೇರಿದ ಬಳಿಕ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿರುವುದೇಕೆ ಎಂಬುದೇ ಅರ್ಥವಾಗದ ವಿಚಾರ. ಅಷ್ಟಕ್ಕೂ ದುಬೈ ಭಾರತದ ತವರು ನಗರವಲ್ಲ. ಭಾರತದ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಹೇಳಿದಂತೆ ನಮಗೂ ಇದು ಅನ್ಯ ದೇಶದ ಪಿಚ್. ನಮ್ಮ ತವರಿನ ಅಂಕಣವಲ್ಲ. ನಮಗೂ ಈ ಅಂಕಣ ಹೊಸದು. ಅಷ್ಟಕ್ಕೂ ನಾವು ಈ ಪಿಚ್ ನಲ್ಲೇ ಅಭ್ಯಾಸ ನಡೆಸುತ್ತಿಲ್ಲ. ಎಲ್ಲರಂತೆ ನಾವೂ ಅಭ್ಯಾಸ ನಡೆಸುವುದು ಐಸಿಸಿ ಗ್ರೌಂಡ್ ನಲ್ಲಿ. ಕೇವಲ ಪಂದ್ಯವಾಡಲು ಮಾತ್ರ ಇಲ್ಲಿಗೆ ಬರುತ್ತಿದ್ದೇವೆ. ನಾವು ಆಡಿದ ಎಲ್ಲಾ ಪಂದ್ಯಗಳಲ್ಲೂ ವ್ಯತ್ಯಸ್ಥ ಪಿಚ್ ಗಳಿತ್ತು. ಆ ಪಿಚ್ ಹೇಗಿರುತ್ತದೆ ಎಂದು ನಮಗೆ ಮೊದಲೇ ಊಹೆಯೂ ಇರಲಿಲ್ಲ. ಹೀಗಾಗಿ ನಮಗೆ ಮಾತ್ರ ಲಾಭವಾಗುತ್ತಿದೆ ಎಂಬ ವಾದವೇ ಒಪ್ಪುವಂತದ್ದಲ್ಲ ಎಂದು ರೋಹಿತ್, ಗಂಭೀರ್ ಹೇಳಿದ್ದರು. ಈಗ ಭಾರತ ಫೈನಲ್ ಗೇರಿದ ಬಳಿಕವಂತೂ ಎಲ್ಲಾ ತಂಡಗಳೂ ಕುಣಿಯಲು ಬಾರದವನು ನೆಲ ಡೊಂಕು ಎಂದನಂತೆ ಎಂಬಂತೆ ಏಕತಾಣದ ಲಾಭದ ಮೇಲೆ ಗೂಬೆ ಕೂರಿಸುತ್ತಿವೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ಮುಂದಿನ ಸುದ್ದಿ
Show comments