Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ

Krishnaveni K
ಶುಕ್ರವಾರ, 6 ಜೂನ್ 2025 (10:15 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಪತ್ನಿ ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು. ಅವರು ಯಾರು ಇಲ್ಲಿದೆ ಹಿನ್ನಲೆ.
 

ಆರ್ ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲಿ ಈ ಬಾರಿ ಅನುಷ್ಕಾ ಶರ್ಮಾ ಓರ್ವ ಗೆಳತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಬಿಳಿ ಶರ್ಟ್ ನಲ್ಲಿ ಕೆಂಪು ಲಿಪ್ ಸ್ಟಿಕ್ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದ ಈ ಮಹಿಳೆ ಯಾರು ಎಂದು ಹಲವರಿಗೆ ಕುತೂಹಲವಾಗಿತ್ತು.

ಈಕೆ ಬೇರೆ ಯಾರೂ ಅಲ್ಲ. ಈಗ ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯಕ್. ಈಕೆ ರಿಷಭ್ ಪಂತ್ ಶತಕ ಸಿಡಿಸಿದ ಬಳಿಕ ಪಲ್ಟಿ ಹೊಡೆದು ಸಂಭ್ರಮಾಚರಣೆ ಮಾಡಿದ್ದನ್ನು ವ್ಯಂಗ್ಯ ಮಾಡಿ ಸುದ್ದಿಯಾಗಿದ್ದರು. ಈಕೆ ಕೂಡಾ ಉದ್ಯಮಿಯೇ.

ಅನುಷ್ಕಾ ಶರ್ಮಾ ನಿಕಟವರ್ತಿಯಾಗಿರುವುದರಿಂದ ವಿರಾಟ್ ಕೊಹ್ಲಿಗೂ ಆಪ್ತರಾಗಿದ್ದರು. ಗ್ಯಾಲರಿ ಮಾತ್ರವಲ್ಲ, ಮೈದಾನದಲ್ಲಿ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆ ಮಾಳವಿಕಾ ಕೂಡಾ ಸಂಭ್ರಮಾಚರಣೆ ವೇಳೆ ಜೊತೆಗಿದ್ದರು. ಇನ್ನು, ಹೆಚ್ಚಿನ ಪಂದ್ಯಗಳಲ್ಲಿ ಮಾಳವಿಕಾ ಜೊತೆ ನಿಖಿಲ್ ಸೋಸಲೆ ಕೂಡಾ ಅನುಷ್ಕಾ ಜೊತೆಯೇ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು. ಅವರೇ ಈಗ ಚಿನ್ನಸ್ವಾಮಿಯಲ್ಲಿ ಉಚಿತ ಪಾಸ್, ವಿಕ್ಟರಿ ಪೆರೇಡ್ ಬಗ್ಗೆ ಘೋಷಣೆ ಮಾಡಿದ್ದಾರೆ ಎನ್ನುವುದು ಆರೋಪವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

ಮುಂದಿನ ಸುದ್ದಿ
Show comments