Webdunia - Bharat's app for daily news and videos

Install App

2024ರಲ್ಲಿ ವಿದಾಯ ಘೋಷಿಸಿದ ಭಾರತದ ಟಾಪ್ ಕ್ರಿಕೆಟ್ ತಾರೆಯರು ಯಾರೆಲ್ಲಾ

Sampriya
ಶನಿವಾರ, 21 ಡಿಸೆಂಬರ್ 2024 (17:13 IST)
Photo Courtesy X
ನವದೆಹಲಿ: 2024ರಲ್ಲಿ ಭಾರತವು ಕ್ರಿಕೆಟ್‌ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಅದರಲ್ಲೂ ವೆಸ್ಟ್‌ಇಂಡೀಸ್‌- ಅಮೆರಿಕಾ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ ಅನ್ನು ಭಾರತ ಗೆದ್ದು ಐತಿಹಾಸಕ ಸಾಧನೆ ಇದೇ ವರ್ಷ ಮಾಡಿದೆ. ಈ ವರ್ಷ ಸಾಕಷ್ಟು ಕ್ರಿಕೆಟಿಗರು ಮಿಂಚಿದರೆ, ಮತ್ತೆ ಕೆಲವರು ನಿವೃತ್ತಿ ಘೋಷಿಸಿದ್ದಾರೆ. ಈ ವರ್ಷ ವಿದಾಯ ಘೋಷಿಸಿದ ಭಾರತದ ಪ್ರಮುಖ ಆಟಗಾರರ ಮೆಲುಕು ನೋಡ ಇಲ್ಲಿದೆ.

ರವಿಚಂದ್ರನ್ ಅಶ್ವಿನ್: ಅನುಭವಿ ಆಫ್ ಸ್ಪಿನ್ನರ್ ಕಳೆದ ವಾರ ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೂರನೇ ಟೆಸ್ಟ್ ಪಂದ್ಯದ ನಂತರ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಭಾರತ ಪರ 287 ಪಂದ್ಯಗಳಲ್ಲಿ ಅಶ್ವಿನ್ 765 ವಿಕೆಟ್ ಪಡೆದು 4.344 ರನ್ ಗಳಿಸಿದ್ದಾರೆ. ಅವರು ಟೆಸ್ಟ್‌, ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು. ಆದರೆ, ಕ್ಲಬ್‌ ಮಟ್ಟದಲ್ಲಿ ಮುಂದುವರಿಯಲಿದ್ದಾರೆ.

ಶಿಖರ್ ಧವನ್:  ಭಾರತದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 167 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು 17 ಶತಕಗಳು ಮತ್ತು 39 ಅರ್ಧಶತಕಗಳನ್ನು ಒಳಗೊಂಡಂತೆ 44.1 ರ ಸರಾಸರಿಯಲ್ಲಿ 6,793 ರನ್‌ಗಳನ್ನು ಕಲೆ ಹಾಕಿದ್ದಾರೆ.

ವಿರಾಟ್ ಕೊಹ್ಲಿ: ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಬಾರ್ಬಡೋಸ್‌ನಲ್ಲಿ ಭಾರತ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದ ನಂತರ ಕೊಹ್ಲಿ ಟಿ 20 ಸ್ವರೂಪದಿಂದ ನಿವೃತ್ತಿ ಪಡೆದರು. 125 ಪಂದ್ಯಗಳಲ್ಲಿ, ವಿರಾಟ್ 48.69 ರ ಸರಾಸರಿಯಲ್ಲಿ ಮತ್ತು 137.04 ರ ಸ್ಟ್ರೈಕ್ ರೇಟ್‌ನಲ್ಲಿ 4,188 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ: ವಿರಾಟ್ ಕೊಹ್ಲಿ ಜೊತೆಗೆ, ತಂಡದ ನಾಯಕ ರೋಹಿತ್ ಕೂಡ ಬಾರ್ಬಡೋಸ್‌ನಲ್ಲಿ ಕೊನೆಗೊಂಡ ನಂತರ ಟಿ 20 ಅಂತರರಾಷ್ಟ್ರೀಯ ಸ್ವರೂಪದಿಂದ ನಿವೃತ್ತರಾದರು. ಅವರು  159 ಪಂದ್ಯಗಳಲ್ಲಿ 4231 ರನ್ ಗಳಿಸಿದ್ದಾರೆ. ರೋಹಿತ್ ಈ ಮಾದರಿಯ ಅತ್ಯುತ್ತಮ ಸ್ಕೋರರ್‌ಗಳಲ್ಲಿ ಒಬ್ಬರು. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳ (ಐದು) ದಾಖಲೆ ಅವರ ಹೆಸರಿನಲ್ಲಿದೆ.

ರವೀಂದ್ರ ಜಡೇಜ: ವಿರಾಟ್ ಮತ್ತು ರೋಹಿತ್ ಜೊತೆಗೆ, ಜಡೇಜಾ ಕೂಡ ಟಿ20 ಸ್ವರೂಪದಿಂದ ನಿವೃತ್ತರಾದರು. 2009ರ ಫೆಬ್ರವರಿಯಲ್ಲಿ ಅವರು ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದರು. ಆಲ್‌ರೌಂಡರ್ ಆಗಿರುವ ಅವರು ಒಟ್ಟು 74 ಪಂದ್ಯಗಳನ್ನು ಆಡಿದ್ದಾರೆ. ಅವರು 29.85 ಸರಾಸರಿಯಲ್ಲಿ 54 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು ಮತ್ತು 127.16 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 515 ರನ್ ಗಳಿಸಿದರು.


ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments