ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

Sampriya
ಬುಧವಾರ, 16 ಜುಲೈ 2025 (14:33 IST)
Photo Credit X
ಲಂಡನ್: ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್‌ ತಂಡಗಳು ಬ್ರಿಟನ್‌ನ ರಾಜಕುಮಾರ ಮೂರನೇ ಚಾರ್ಲ್ಸ್‌ ಅವರ ಆಹ್ವಾನದ ಮೇರೆಗೆ ‘ಗಾರ್ಡನ್ಸ್‌ ಆಫ್ ಕ್ಲಾರೆನ್ಸ್ ಹೌಸ್‌’ಗೆ ಭೇಟಿ ನೀಡಿದ್ದವು. ಈ ಸಂದರ್ಭದಲ್ಲಿ 76 ವರ್ಷದ ಚಾರ್ಲ್ಸ್‌ ಅವರು ಆಟಗಾರರೊಂದಿಗೆ ಹೆಚ್ಚು ಹೊತ್ತು ಸಂವಾದ ನಡೆಸಿದರು.

ಎರಡೂ ತಂಡಗಳ ಆಟಗಾರರೊಂದಿಗೆ ಚಾರ್ಲ್ಸ್‌ ಮುಕ್ತವಾಗಿ ಮಾತುಕತೆ ನಡೆಸಿದರು. ಇದೇ ವೇಳೆ ನಾಯಕ ಶುಭಮನ್ ಗಿಲ್ ಅವಲ್ಲಿ, ನಿಮ್ಮ ಕೊನೆಯ ಬ್ಯಾಟರ್ ಮೊಹಮ್ಮದ್ ಸಿರಾಜ್ ಅವರು ಔಟಾಗಿದ್ದು ದುರದೃಷ್ಟಕರ. ಆದರೆ ಆ ಸಂದರ್ಭದಲ್ಲಿ ನಿಮಗೆ ಹೇಗನಿಸಿತು ಎಂದು ಚಾರ್ಲ್ಸ್‌ ಪ್ರಶ್ನಿಸಿದರು. ಈ ವಿಚಾರವನ್ನು ಗಿಲ್‌ ಅವರೇ ಹೇಳಿದ್ದಾರೆ. 

ಲಾರ್ಡ್ಸ್‌ನಲ್ಲಿ ಭಾರತ ತಂಡವು ಕೇವಲ 22 ರನ್‌ಗಳಿಂದ ಸೋತಿತು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರ  ವಿರೋಚಿತ ಹೋರಾಟದಿಂದಾಗಿ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿತ್ತು. 

ಚಾರ್ಲ್ಸ್‌ ಪ್ರಶ್ನೆಗೆ ಉತ್ತರಿಸಿದ ಗಿಲ್‌, ಅದೊಂದು ದುರದೃಷ್ಟಕರ ಪಂದ್ಯ. ಸರಣಿಯ ಮುಂದಿನ ಎರಡೂ ಪಂದ್ಯಗಳಲ್ಲಿ ಅದೃಷ್ಟ ನಮ್ಮ ಪರವಾಗಿರುವ ನಿರೀಕ್ಷೆ ಇದೆ ಎಂದೆವು. ಅವರೊಂದಿಗೆ ಇನ್ನೂ ಬಹಳಷ್ಟು ಅರ್ಥಪೂರ್ಣ ಮಾತುಕತೆಗಳನ್ನು ಮಾಡಿದೆವು 

ಆದರೆ, ಇಂಗ್ಲೆಂಡ್ ಆಫ್‌ಸ್ಪಿನ್ನರ್ ಶೋಯಬ್ ಬಶೀರ್ ಅವರ ಎಸೆತವನ್ನು ಸಿರಾಜ್ ರಕ್ಷಣಾತ್ಮಕವಾಗಿ ಆಡಿದರು. ಚೆಂಡು ನೆಲದ ಮೇಲೆ ನಿಧಾನವಾಗಿ ಉರುಳುತ್ತಾ ಹೋಗಿ ಸ್ಟಂಪ್‌ಗೆ ಬಡಿದು ಬೇಲ್ಸ್‌ ಉರುಳಿದವು. ಅದರೊಂದಿಗೆ ಭಾರತಕ್ಕೆ ಸೋಲಿನ ನಿರಾಸೆ ಕಾಡಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ವಿಶ್ವಕಪ್ ಗೆದ್ದ ಮೈದಾನದಲ್ಲೇ ಸ್ಮೃತಿ ಮಂಧಾನಗೆ ಕನಸಿನಂತೆ ಪ್ರಪೋಸ್ ಮಾಡಿದ ಭಾವೀ ಪತಿ video

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಮುಂದಿನ ಸುದ್ದಿ
Show comments