ರವಿಚಂದ್ರನ್ ಅಶ್ವಿನ್ ಮನೋಜ್ಞ ಆಲ್‌ರೌಂಡ್ ಪ್ರದರ್ಶನದ ಮೂಲಕ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ನಾಲ್ಕನೇ ದಿನದಾಟದಲ್ಲಿ ಇನ್ನಿಂಗ್ಸ್ ಮತ್ತು 92 ರನ್ ಜಯಗಳಿಸಲು ನೆರವಾಗಿದ್ದಾರೆ.
ಅಶ್ವಿನ್ ತಮ್ಮ ಮಾರಕ ಬೌಲಿಂಗ್ ದಾಳಿ ಮೂಲಕ 25 ಓವರುಗಳಲ್ಲಿ ಏಳು ವಿಕೆಟ್ ಗಳಿಸಿ ವೆಸ್ಟ್ ಇಂಡೀಸ್ ಬ್ಯಾಟಿಂಗನ್ನು ಧೂಳೀಪಟ ಮಾಡಿದರು. ಇದರ ಜತೆ ಅವರ 113 ರನ್ ಶತಕದ ನೆರವಿನಿಂದ ಭಾರತ 8 ವಿಕೆಟ್‌ಗೆ 566 ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ 21ಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 231ಕ್ಕೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಒಂದೂ ವಿಕೆಟ್ ಕಬಳಿಸದಿದ್ದ ಅಸ್ವಿನ್ ಮಧ್ಯಾಹ್ನದ ಸೆಷನ್‌ವನ್ಲಿ 5 ವಿಕೆಟ್ ಕಬಳಿಸಿ ಟೀ ನಂತರ ಇನ್ನೆರಡು ವಿಕೆಟ್ ಕಿತ್ತರು. ಈ ಜಯದಿಂದ ಭಾರತ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಅಶ್ವಿನ್ ಅವರು ಓಪನಿಂಗ್ ಬ್ಯಾಟ್ಸ್‌ಮನ್ ರಾಜೇಂದ್ರ ಚಂದ್ರಿಕಾ ಅವರನ್ನು ಔಟ್ ಮಾಡಿ ಮೊದಲ ವಿಕೆಟ್ ಕಬಳಿಸಿದರು. ಇದಾದ ಬಳಿಕ ವಿಂಡೀಸ್ 6 ವಿಕೆಟ್‌ಗಳು ಕೇವಲ 44 ರನ್‌ಗಳಿಗೆ ಉರುಳಿತು. ವಿಂಡೀಸ್ ಕುಸಿತದ ವೇಗ ಯಾವ ರೀತಿಯಿತ್ತೆಂದರೆ ಟೀ ವಿರಾಮಕ್ಕೆ ಮುಂಚೆಯೇ ಭಾರತ ಗೆಲ್ಲುವುದೆಂದು ನಿರೀಕ್ಷಿಸಲಾಗಿತ್ತು.
ಆದರೆ ಬ್ರಾತ್‌ವೈಟ್ ಮತ್ತು ಬಿಶೂ ಅವರು ಪ್ರತಿರೋಧ ಒಡ್ಡಿದರು. ಬ್ರಾತ್‌ವೈಟ್ ಅಜೇಯ 51 ಗಳಿಸಿದರು.
ಬ್ಯಾಟಿಂಗ್ ವಿವರ
ಭಾರತ ಮೊದಲ ಇನ್ನಿಂಗ್ಸ್
8ಕ್ಕೆ 566 ರನ್ ಡಿಕ್ಲೇರ್ಡ್
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್
243ಕ್ಕೆ ಆಲೌಟ್
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ 231ಕ್ಕೆ ಆಲೌಟ್, ಭಾರತಕ್ಕೆ ಇನ್ನಿಂಗ್ಸ್ ಮತ್ತು 92 ರನ್‌ನಿಂದ ಜಯ
ವಿಂಡೀಸ್ ಬ್ಯಾಟಿಂಗ್ ವಿವರ
ರಾಜೇಂದ್ರ ಚಂದ್ರಿಕಾ 31 ರನ್, ಮಾರ್ಲನ್ ಸ್ಯಾಮ್ಯುಯಲ್ಸ್ 50 ರನ್, ಬ್ರಾತ್‌ವೈಟ್ 41 ರನ್, ದೇವೇಂದ್ರ ಬಿಶೂ 45 ರನ್
ವಿಕೆಟ್ ಪತನ
2-1 (ಕ್ರೈಗ್ ಬ್ರಾಥ್ವೈಟ್, 0.5), 21-2 (ಡ್ಯಾರೆನ್ ಬ್ರಾವೊ, 13.5), 88-3 (ರಾಜೇಂದ್ರ ಚಂದ್ರಿಕಾ, 35.5), 92-4 (ಜರ್ಮೈನ್ ಬ್ಲ್ಯಾಕ್ 37.5), 101-5 (ಮರ್ಲಾನ್ ಸ್ಯಾಮುಯೆಲ್ಸ್, 41.5), 106-6 (ರೋಸ್ಟನ್ ಚೇಸ್, 45.4), 120-7 (ಶೇನ್ ಡೌರ್ವಿಕ್, 48.6), 132-8 (ಜೇಸನ್ ಹೋಲ್ಡರ್, 53.2), 227-9 (ದೇವೇಂದ್ರ ಬಿಶೂ, 77.3), 231-10 (ಶಾನನ್ ಗ್ಯಾಬ್ರಿಯಲ್, 77.6)
ಬೌಲಿಂಗ್ ವಿವರ
ಇಶಾಂತ್ ಶರ್ಮಾ 1 ವಿಕೆಟ್, ಉಮೇಶ್ ಯಾದವ್ 1 ವಿಕೆಟ್, ರವಿಚಂದ್ರನ್ ಅಶ್ವಿನ್ 7 ವಿಕೆಟ್ ಮತ್ತು ಅಮಿತ್ ಮಿಶ್ರಾ 1 ವಿಕೆಟ್
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.