Select Your Language

Notifications

webdunia
webdunia
webdunia
webdunia

ಮತ್ತೆ ಟ್ವಿಟರ್ ನಲ್ಲಿ ಮಿಂಚಿದ ವೀರೇಂದ್ರ ಸೆಹ್ವಾಗ್!

ಮತ್ತೆ ಟ್ವಿಟರ್ ನಲ್ಲಿ ಮಿಂಚಿದ ವೀರೇಂದ್ರ ಸೆಹ್ವಾಗ್!
NewDelhi , ಭಾನುವಾರ, 23 ಅಕ್ಟೋಬರ್ 2016 (13:46 IST)
ನವದೆಹಲಿ: ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಸೆಹ್ವಾಗ್ ಟ್ವಿಟರ್ ಖಾತೆಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಸೆಮಿಫೈನಲ್ ಕಬಡ್ಡಿ ಪಂದ್ಯದಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ ಸೋತಿತು ಎಂದು ಬರೆಯುವಾಗ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಕ್ಕೆ ಇಂಗ್ಲೆಂಡ್ ಪತ್ರಕರ್ತ ಪೀರ್ಸ್ ಮಾರ್ಗನ್ ಅವರನ್ನು ಕೆಣಕಿದ್ದು ಸುದ್ದಿಯಾಗಿತ್ತು.

ಆಗ ಸುಮ್ಮನಿದ್ದ ಸೆಹ್ವಾಗ್ ಈಗ ತಕ್ಕ ಉತ್ತರ ನೀಡಿದ್ದಾರೆ. ಕಬಡ್ಡಿ ವಿಶ್ವಕಪ್ ಗೆದ್ದ ಉತ್ಸಾಹದಲ್ಲಿ ಟ್ವೀಟ್ ಮಾಡಿದ ವೀರೂ “ಭಾರತ ಕಬಡ್ಡಿ ಆಟ ಕಂಡುಹಿಡಿದದ್ದು ಮಾತ್ರವಲ್ಲ. 8 ಬಾರಿ ವಿಶ್ವಕಪ್ ಗೆದ್ದಿದೆ. ಆದರೆ ಕೆಲವರು ಕ್ರಿಕೆಟ್ ಕಂಡುಹಿಡುಕಿದರೂ ಇದುವರೆಗೆ ಬೇರೊಬ್ಬರ ಕಾಮೆಂಟ್ ಗಳ ಸ್ಪೆಲ್ಲಿಂಗ್ ಸರಿ ಮಾಡುವುದರಲ್ಲೇ ಇದ್ದಾರೆ” ಎಂದು ಕೆಣಕಿದ್ದಾರೆ.

ಸೆಹ್ವಾಗ್ ಅವರ ಈ ಟ್ವೀಟ್ ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ಮುಂದೆ ಪೀರ್ಸ್ ಮಾರ್ಗನ್ ಯಾವ ರೀತಿ ಉತ್ತರಿಸುತ್ತಾರೆಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶಕ್ಕೆ ಇಂಗ್ಲೆಂಡ್ ಟಾರ್ಗೆಟ್