ಮೂರನೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗ್ತಾರಾ ವಿರಾಟ್ ಕೊಹ್ಲಿ?

Webdunia
ಮಂಗಳವಾರ, 14 ಆಗಸ್ಟ್ 2018 (09:42 IST)
ಲಾರ್ಡ್ಸ್: ಮೊದಲೇ ಎರಡೂ ಟೆಸ್ಟ್ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿ ಗಾಯದ ಚಿಂತೆ ಬರೆ ಎಳೆದಂತಾಗಿದೆ.

ಇಂಗ್ಲೆಂಡ್ ಸರಣಿಗೆ ಮೊದಲು ಬೆನ್ನು ನೋವಿನಿಂದ ಚೇತರಿಸಿಕೊಂಡಿದ್ದ ಕೊಹ್ಲಿ ಮತ್ತೆ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಈ ಸಮಸ್ಯೆ ಕಾಡಿದೆ. ಪಂದ್ಯದ ನಡುವೆ ಫಿಸಿಯೋ ಬಂದು ಕೊಹ್ಲಿಗೆ ಚಿಕಿತ್ಸೆ ನೀಡಬೇಕಾಗಿ ಬಂದಿತ್ತು.

ಬೆನ್ನು ನೋವಿನ ಕಾರಣಕ್ಕೆ ಅಂತಿಮ ದಿನ ಕೊಹ್ಲಿ ಫೀಲ್ಡಿಂಗ್ ಗೂ ಆರಂಭದಲ್ಲಿ ಬಂದಿರಲಿಲ್ಲ. ಬಿಡುವಿಲ್ಲದ ಕ್ರಿಕೆಟ್ ನಿಂದಾಗಿ ತಮಗೆ ಈ ಸಮಸ್ಯೆ ಕಾಡುತ್ತಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಟೀಂ ಇಂಡಿಯಾ ಬ್ಯಾಟಿಂಗ್ ಗೆ ಕೊಹ್ಲಿಯೇ ಆಧಾರ.

ಹೀಗಾಗಿ ಅವರು ಮೂರನೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗುವುದು ಮುಖ್ಯ. ಸದ್ಯಕ್ಕೆ ಅವರು ಬೆನ್ನು ನೋವಿನಿಂದ ಮುಕ್ತಿ ಪಡೆಯಲು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಮುಂದಿನ ಪಂದ್ಯಕ್ಕಾಗುವಾಗ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎದುರಾಳಿ ಆಟಗಾರನಾಗಿದ್ದರೂ ಕನ್ನಡಿಗ ಮನೀಶ್ ಪಾಂಡೆಗೆ ವಿರಾಟ್ ಕೊಹ್ಲಿ ಶಹಬ್ಬಾಷ್ Video

IPL 2026: ವಿರಾಟ್ ಕೊಹ್ಲಿ ಕಾಲಿಗೆ ಬೀಳಲು ಮೈದಾನಕ್ಕೇ ನುಗ್ಗಿದ ಅಭಿಮಾನಿ: ಕೊಹ್ಲಿ ಮಾಡಿದ್ದೇನು video

ಮೊದಲ ರನ್ ಗಳಿಸಿದ್ದಕ್ಕೆ ವಿರಾಟ್ ಕೊಹ್ಲಿ ಈ ಪರಿ ಸಂಭ್ರಮಿಸಿದ್ದೇಕೆ Video

IPL 2026: ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಬೆಚ್ಚಿಬಿದ್ದ ಕೆಕೆಆರ್‌: ಪ್ಲೇ ಆಫ್‌ನತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB VS KKR, ಇನ್ನೂ ಶುರುವಾಗದ ಪಂದ್ಯಾಟ, ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments