Webdunia - Bharat's app for daily news and videos

Install App

ನನ್ನ ತಲೆಗೆ ಪೆಟ್ಟು ಬಿದ್ದು ಕಣ್ಣು ಮಂಜಾಗುತ್ತಿತ್ತು..! ಹಳೆಯ ಘಟನೆ ನೆನಪಿಸಿದ ವಿರಾಟ್ ಕೊಹ್ಲಿ

Krishnaveni K
ಶನಿವಾರ, 13 ಏಪ್ರಿಲ್ 2024 (14:18 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಶತಕವನ್ನು ಅವರ ಅಭಿಮಾನಿಗಳು ಖಂಡಿತಾ ಮರೆಯಲ್ಲ. ಈ ಪಂದ್ಯದಲ್ಲಿ ಅವರ ಮತ್ತು ಆಸೀಸ್ ವೇಗಿ ಮಿಚೆಲ್ ಜಾನ್ಸನ್ ನಡುವೆ ಮಾತಿನ ಕದನವೇರ್ಪಟ್ಟಿತ್ತು.

ಆ ಘಟನೆಯನ್ನು ಕೊಹ್ಲಿ ಇದೀಗ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ. ಅಂದು ಏನಾಗಿತ್ತು, ತಾನು ಹೇಗೆ ಸಿಡಿದೆದ್ದೆ ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ. ಅದು ನಾಯಕನಾಗಿ ಕೊಹ್ಲಿಗೆ ಮೊದಲ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಹೋರಾಟದ ಶತಕವನ್ನೂ ಸಿಡಿಸಿದ್ದರು.

ನಾನು ಪಂದ್ಯಕ್ಕೆ ಎರಡು ತಿಂಗಳಿನಿಂದ ತಯಾರಿ ಮಾಡಿಕೊಂಡು ಬಂದಿದ್ದೆ. ಆದರೆ ಮಿಚೆಲ್ ಜಾನ್ಸನ್ ನನ್ನ ತಲೆಗೇ ಹೊಡೆಯುವಂತೆ ಬೌನ್ಸರ್ ಎಸೆದರು. ಆ ಬೌನ್ಸರ್ ನನ್ನ ಯೋಜನೆಯನ್ನೇ ಬದಲಾಯಿಸಿತು. ತಲೆಗೆ ಬೌನ್ಸರ್ ಬಿದ್ದ ರಭಸಕ್ಕೆ ನನಗೆ ಎಡದ ಕಣ್ಣು ಕೆಲವು ಸಮಯದ ನಂತರ ಮಂಜಾಗಲು ಆರಂಭವಾಗಿತ್ತು.

ಭೋಜನ ವಿರಾಮದ ಅವಧಿಯಲ್ಲಿ ನಾನು ಇದರ ಬಗ್ಗೆ ಯೋಚಿಸಿದೆ. ಒಂದೋ ನಾನು ಇದನ್ನು ಎದುರಿಸಿ ನಿಲ್ಲಬೇಕು, ಇಲ್ಲವೇ ಹೆದರಿ ಓಡಬೇಕು. ನಾನು ಎದುರಿಸಿ ನಿಲ್ಲುವ ನಿರ್ಧಾರ ಮಾಡಿದೆ. ನನ್ನ ತಲೆಗೆ ಹೊಡೆಯಲು ಆತನಿಗೆ ಎಷ್ಟು ಧೈರ್ಯ ಎಂದು ಆಕ್ರೋಶ ಹುಟ್ಟಿತು. ಆತನಿಗೆ ತಕ್ಕ ತಿರುಗೇಟು ನೀಡಲೇಬೇಕು ಎಂದುಕೊಂಡೆ.

ವಿಶೇಷವೆಂದರೆ ಆಗ ಮಿಚೆಲ್ ಜಾನ್ಸನ್ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಆದರೆ ಕೊಹ್ಲಿ ಆ ಪಂದ್ಯದಲ್ಲಿ ಹೇಗೆ ರಿವೆಂಜ್ ತೆಗೆದುಕೊಂಡರೆಂದರೆ ಆಸ್ಟ್ರೇಲಿಯನ್ನರೇ ಹೊಟ್ಟೆ ಉರಿಪಟ್ಟುಕೊಳ್ಳುವ ಹಾಗೆ ಶತಕ ಸಿಡಿಸಿದರು. ‘ಆವತ್ತು ನಾನು ಭೋಜನ ವಿರಾಮದ ಬಳಿಕ ತಕ್ಕ ತಿರುಗೇಟು ನೀಡಬೇಕು ಎಂದುಕೊಂಡೆ. ಅದರಂತೆ ಅವರ ಬಾಲ್ ನ್ನು ಹಿಗ್ಗಾಮುಗ್ಗಾ ಬಾರಿಸಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments