Webdunia - Bharat's app for daily news and videos

Install App

ರೋಹಿತ್ ಶರ್ಮಾ ಔಟಾಗಿ ಮರಳುತ್ತಿದ್ದಾಗ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ

Krishnaveni K
ಮಂಗಳವಾರ, 25 ಜೂನ್ 2024 (10:15 IST)
Photo Credit: X
ಸೈಂಟ್ ಲೂಸಿಯಾ: ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಹೊಡೆಬಡಿಯ ಇನಿಂಗ್ಸ್ ಆಡಿ ನಾಯಕ ರೋಹಿತ್ ಶರ್ಮಾ ಔಟಾಗಿ ಪೆವಿಲಿಯನ್ ಗೆ ಮರಳುವಾಗ ವಿರಾಟ್ ಕೊಹ್ಲಿ ನೀಡಿದ ಪ್ರತಿಕ್ರಯೆ ಎಲ್ಲರ ಗಮನ ಸೆಳೆದಿದೆ.


ನಿನ್ನೆಯ ಪಂದ್ಯದಲ್ಲಿ ರೋಹಿತ್ ಆಸ್ಟ್ರೇಲಿಯಾ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿ 41 ಎಸೆತಗಳಿಂದ 92 ರನ್ ಗಳಿಸಿದ್ದಾಗ ಔಟಾದರು. ಅರ್ಹ ಶತಕವೊಂದು ಅವರಿಗೆ ಮಿಸ್ ಆಗಿತ್ತು. ಆದರೆ ಆಗಲೇ ತಂಡಕ್ಕೆ ಬೇಕಾದಂತಹ ಭದ್ರ ಅಡಿಪಾಯ ಅವರು ಹಾಕಿಕೊಟ್ಟಿದ್ದರು. ಅದರಲ್ಲೂ ಅವರು ಸಿಡಿಸಿದ 8 ಸಿಕ್ಸರ್ ಗಳ ಪೈಕಿ ಒಮ್ಮೆಯಂತೂ ಬಾಲ್ ಮೈದಾನದಾಚೆ ದಾಟಿತ್ತು. ಇದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು.

ರೋಹಿತ್ ಈ ಸಿಡಿಲಬ್ಬದ ಬ್ಯಾಟಿಂಗ್ ಮಾಡಿ 92 ರನ್ ಗಳಿಸಿ ಔಟಾದಾಗ ಎಲ್ಲರಲ್ಲೂ ನಿರಾಸೆಯಿತ್ತು. ಆದರೆ ಈ ಇನಿಂಗ್ಸ್ ಯಾವ ಶತಕಕ್ಕೂ ಕಮ್ಮಿಯಿರಲಿಲ್ಲ. ಹೀಗಾಗಿ ಇಡೀ ಮೈದಾನವೇ ಎದ್ದು ನಿಂತು ರೋಹಿತ್ ಗೆ ಸೆಲ್ಯೂಟ್ ಮಾಡಿತ್ತು. ಡಗೌಟ್ ನಲ್ಲಿ ಕುಳಿತಿದ್ದ ಟೀಂ ಇಂಡಿಯಾ ಆಟಗಾರರು, ಸಿಬ್ಬಂದಿಗಳೂ ರೋಹಿತ್ ಗೆ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.

ಅದರಲ್ಲೂ ವಿರಾಟ್ ಕೊಹ್ಲಿಯಂತೂ ರೋಹಿತ್ ಬ್ಯಾಟಿಂಗ್ ಡಗೌಟ್ ನಲ್ಲಿ ಕುಳಿತು ಭಾರೀ ಎಂಜಾಯ್ ಮಾಡುತ್ತಿದ್ದರು. ಅವರ ಪ್ರತಿಯೊಂದು ಸಿಕ್ಸರ್ ಗೂ ವಾವ್ ಎನ್ನುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ಬಳಿಕ ರೋಹಿತ್ ಔಟಾಗಿ ಮರಳುವಾಗ ಎದ್ದು ನಿಂತು ಶಹಬ್ಬಾಶ್ ಎನ್ನುತ್ತಾ ವಿರಾಟ್ ಚಪ್ಪಾಳೆ ತಟ್ಟಿದ್ದು ಎಲ್ಲರ ಗಮನ ಸೆಳೆಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments