Select Your Language

Notifications

webdunia
webdunia
webdunia
webdunia

T20 World Cup 2024: ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸುತ್ತಾ ಟೀಂ ಇಂಡಿಯಾ

Rohit Sharma

Krishnaveni K

ಸೈಂಟ್ ಲೂಸಿಯಾ , ಸೋಮವಾರ, 24 ಜೂನ್ 2024 (08:54 IST)
ಸೈಂಟ್ ಲೂಸಿಯಾ: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾಗೆ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ತಕ್ಕ ಅವಕಾಶ ಎದುರಾಗಿದೆ. ಇಂದು ಟೀಂ ಇಂಡಿಯಾ ಎದುರು ಆಸ್ಟ್ರೇಲಿಯಾ ಸೋತರೆ ಟೂರ್ನಿಯಿಂದಲೇ ಹೊರನಡೆಯಲಿದೆ.

ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಕ್ಕ ಸೋಲನ್ನು ಯಾವ ಭಾರತೀಯ ಆಟಗಾರನೂ ಇನ್ನೂ ಮರೆತಿಲ್ಲ.  ಇಂದು ಆಸ್ಟ್ರೇಲಿಯಾ ಈ ಟೂರ್ನಿಯಲ್ಲಿ ಉಳಿಸುವ ಅಥವಾ ಹೊರಹಾಕು ಪವರ್ ಟೀಂ ಇಂಡಿಯಾ ಕೈಯಲ್ಲಿದೆ. ವಿಧಿಯಾಟವೆಂದರೆ ಇದೇ ಅಲ್ಲವೇ?

ಟೀಂ ಇಂಡಿಯಾ ಸೂಪರ್ 8 ಹಂತದಲ್ಲಿ ಕಳೆದ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದ್ದು ಹೆಚ್ಚು ಕಡಿಮೆ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಇಂದು ಗೆದ್ದರೆ ಟೀಂ ಇಂಡಿಯಾಕ್ಕೆ ಅದು ಪ್ಲಸ್ ಪಾಯಿಂಟ್ ಆಗಲಿದೆ. ಟೀಂ ಇಂಡಿಯಾ ಇದುವರೆಗೆ ನೀಡಿರುವ ಪ್ರದರ್ಶನ ನೋಡಿದರೆ ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ತಂಡವಾಗಿದೆ. ಈ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.

ಆದರೆ ಅತ್ತ ಆಸ್ಟ್ರೇಲಿಯಾಕ್ಕೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಘಾತಕಾರೀ ಸೋಲು ಅನುಭವಿಸಿದ್ದ ಆಸ್ಟ್ರೇಲಿಯಾ ಇಂದು ಸೋತರೆ ಮನೆಗೆ ಹೋಗಬೇಕಾಗುತ್ತದೆ. ಭಾರತದ ವಿರುದ್ಧ ಎಂದರೆ ಆಸ್ಟ್ರೇಲಿಯಾಕ್ಕೆ ಎಕ್ಸ್ ಟ್ರಾ ಪವರ್ ಬರುತ್ತದೆ. ಆದರೆ ವೆಸ್ಟ್ ಇಂಡೀಸ್ ನ ಪಿಚ್ ಗಳು ಬೌಲರ್ ಗಳಿಗೂ ಸಹಕಾರಿಯಾಗಿರುವುದರಿಂದ ಈ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ಸೆಮಿಫೈನಲ್ ತಲುಪಿದ ಮೊದಲ ತಂಡ ಇಂಗ್ಲೆಂಡ್