Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗಾಂತ್ಯ?!

ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗಾಂತ್ಯ?!
ಮುಂಬೈ , ಮಂಗಳವಾರ, 14 ಸೆಪ್ಟಂಬರ್ 2021 (12:02 IST)
ಮುಂಬೈ: ಟೀಂ ಇಂಡಿಯಾದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಾಯಕ ವಿರಾಟ್ ಕೊಹ್ಲಿ-ಕೋಚ್ ರವಿಶಾಸ್ತ್ರಿಯದ್ದೇ ಪಾರುಪತ್ಯ. ಆದರೆ ಈಗ ಇಬ್ಬರ ಯುಗಾಂತ್ಯವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.


ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನದಲ್ಲಿ ಮುಂದುವರಿಯಲು ರವಿಶಾಸ್ತ್ರಿ ಆಸಕ್ತಿ ಹೊಂದಿಲ್ಲ ಎಂದು ಇತ್ತೀಚೆಗೆ ಸುದ್ದಿ ಬಂದಿತ್ತು. ಹೇಗಿದ್ದರೂ ಅಕ್ಟೋಬರ್ ಬಳಿಕ ಅವರ ಗುತ್ತಿಗೆ ಅವಧಿ ಮುಗಿಯಲಿದೆ. ಅದಾದ ಬಳಿಕ ಮತ್ತೊಂದು ಅವಧಿಗೆ ಮುಂದುವರಿಯಲು ಅವರಿಗೆ ಇಷ್ಟವಿಲ್ಲ ಎನ್ನಲಾಗಿದೆ.

ಒಂದು ವೇಳೆ ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿದರೆ ಕೊಹ್ಲಿ-ಶಾಸ್ತ್ರಿ ಯುಗಾಂತ್ಯವಾಗಲಿದೆ. ವಿರಾಟ್ ಕೊಹ್ಲಿ ಬಳಗಕ್ಕೆ ಹೊ ಕೋಚ್ ಜೊತೆಗೆ ಸಹಾಯಕ ಸಿಬ್ಬಂದಿಗಳೂ ಬದಲಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ತುಂಬಾ ಭಯವಾಗಿತ್ತು: ಗಂಗೂಲಿ