Publish Date: Fri, 19 Mar 2021 (10:23 IST)
Updated Date: Fri, 19 Mar 2021 (10:24 IST)
ಅಹಮ್ಮದಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ನಾಳೆ ನಡೆಯಲಿರುವ ಅಂತಿಮ ಟಿ20 ಪಂದ್ಯಕ್ಕೆ ಅವರು ಫಿಟ್ ಆಗ್ತಾರಾ ಎಂಬ ಪ್ರಶ್ನೆ ಕಾಡಿದೆ.
ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಅಂತಿಮ ಓವರ್ ಗಳಲ್ಲಿ ಕೊಹ್ಲಿ 2 ರನ್ ತಡೆಯುವ ನಿಟ್ಟಿನಲ್ಲಿ ಡೈವ್ ಹೊಡೆದಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಇದರಿಂದಾಗಿ ಅಂತಿಮ ಕ್ಷಣಗಳಲ್ಲಿ ಮೈದಾನದಿಂದ ಹೊರನಡೆದಿದ್ದರು. ಕೊನೆಗೆ ರೋಹಿತ್ ಶರ್ಮಾ ನಾಯಕತ್ವದ ಜವಾಬ್ಧಾರಿ ವಹಿಸಿದ್ದರು.
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಗಾಯ ಗಂಭೀರವಲ್ಲ. ಹೀಗಾಗಿ ಅಂತಿಮ ಪಂದ್ಯಕ್ಕೆ ಆಗುವ ವೇಳೆ ಫಿಟ್ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ.