Select Your Language

Notifications

webdunia
webdunia
webdunia
webdunia

ಜಗತ್ತಿನ ಶ್ರೇಷ್ಟ ಅಥ್ಲೀಟ್ ಆಗಲು ವಿರಾಟ್ ಕೊಹ್ಲಿ ಬಯಕೆ

ಜಗತ್ತಿನ ಶ್ರೇಷ್ಟ ಅಥ್ಲೀಟ್ ಆಗಲು ವಿರಾಟ್ ಕೊಹ್ಲಿ ಬಯಕೆ
ನವದೆಹಲಿ , ಮಂಗಳವಾರ, 14 ಜೂನ್ 2016 (16:59 IST)
ನವದೆಹಲಿ: ವಿರಾಟ್ ಕೊಹ್ಲಿ ಉತ್ತಮ  ದೇಹದಾರ್ಢ್ಯತೆ  ಹೊಂದಿರುವ ಭಾರತದ ಕ್ರಿಕೆಟರ್ ಆಗಿದ್ದು, ಚಾಂಪಿಯನ್ ಬ್ಯಾಟ್ಸ್‌ಮನ್‌ಗೆ ಅಷ್ಟರಲ್ಲಿ ಮಾತ್ರ ತೃಪ್ತಿ ಹೊಂದಿಲ್ಲ. ತಾವು ಜಗತ್ತಿನಲ್ಲೇ ಶ್ರೇಷ್ಟ ಅಥ್ಲೀಟ್‌ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ ಎಂದು ಭಾರತ ಮತ್ತು ಆರ್‌ಸಿಬಿ ಫಿಟ್ನೆಸ್ ಕೋಚ್ ಶಂಕರ್ ಬಸು ಬಹಿರಂಗ ಮಾಡಿದ್ದಾರೆ. 
 
 ಕೊಹ್ಲಿ ತಮ್ಮ ಫಿಟ್ನೆಸ್ ಕುರಿತು ವಿಪುಲವಾಗಿ ಕೆಲಸ ಮಾಡುತ್ತಿದ್ದು, ವಿಶೇಷವಾಗಿ ತಮ್ಮ ಬಲ ಹೆಚ್ಚಿಸಿಕೊಳ್ಳುವ ಕಡೆ ಗಮನಹರಿಸಿದ್ದಾರೆ. ಇದರ ಫಲವು ಪಂದ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರೀಗ ಬೌಂಡರಿ ಬಾರಿಸುವಷ್ಟೇ ಸುಲಭವಾಗಿ ಸಿಕ್ಸರುಗಳನ್ನು ಹೊಡೆಯಬಲ್ಲರು. 
 
ವಿರಾಟ್ ಜಗತ್ತಿನಲ್ಲೇ ಶ್ರೇಷ್ಟ ಅಥ್ಲೀಟ್ ಆಗಲು ಬಯಸಿದ್ದು, ಅದಕ್ಕೆ ಆಕಾಶವೇ ಮಿತಿಯಾಗಿದೆ. ಅಥ್ಲೆಟಿಕ್ ಸಾಮರ್ಥ್ಯವಿರುವ ಅನೇಕ ಆದರ್ಶ ಕ್ರೀಡಾಪಟುಗಳು ಅವರಿಗಿಂತ ಮುಂದಿದ್ದು, ಈ ಪೈಪೋಟಿಯಿಂದ ಹಿಂದುಳಿಯಲು ಅವರು ಬಯಸುವುದಿಲ್ಲ ಎಂದು ಬಸು ಬಣ್ಣಿಸಿದ್ದಾರೆ. 
 
ಅನೇಕ ಅಥ್ಲೀಟ್‌ಗಳು ತಾವು ಇಂತಹ ಕೋಚ್ ಸಿಕ್ಕಿದ್ದು ಅದೃಷ್ಟವೆಂದು ಹೇಳುತ್ತಾರೆ. ಆದರೆ ವಿರಾಟ್ ಕೊಹ್ಲಿ ಅಸಾಮಾನ್ಯ ವ್ಯಕ್ತಿಯಾಗಿದ್ದು, ಇಂತಹ ಅಥ್ಲೀಟ್ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಬಸು ಹೇಳಿದರು. ಕೊಹ್ಲಿ ಜತೆ ತಮ್ಮ ಸಂಬಂಧವು ಐಪಿಎಲ್ ಮೂಲಕ 8 ವರ್ಷಗಳ ಹಿಂದೆ ಬೆಸೆದಿದೆ ಎಂದು ಬಸು ಹೇಳಿದರು. ಕೊಹ್ಲಿ ತಮ್ಮ ಫಿಟ್ನೆಸ್‌ ಹೇಗೆ ಸುಧಾರಿಸಿಕೊಳ್ಳುತ್ತಾರೆ ಎಂಬ ಒಳನೋಟವನ್ನು ಬಸು ನೀಡಿದರು. 
 
 ಒಂದೊಮ್ಮೆ ನಮ್ಮ ವಿಧಾನಗಳ ಬಗ್ಗೆ ಅವರಿಗೆ ಮನವರಿಕೆಯಾದರೆ ಅವರು ಅದನ್ನು ಪ್ರಶ್ನಿಸುವುದೇ ಇಲ್ಲ.  ಅವರು ತಮ್ಮ ಪುಷ್ಠಿಕರ ಆಹಾರ ಯೋಜನೆಗಳು ಮತ್ತು ಶಿಸ್ತಿನ ಅಂಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಬಸು ಹೇಳಿದರು.  

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

 
 

Share this Story:

Follow Webdunia kannada

ಮುಂದಿನ ಸುದ್ದಿ

ಯೂರೊ 2016: ಬೆಲ್ಜಿಯಂ ವಿರುದ್ಧ ಇಟಲಿಗೆ 2-0 ಜಯ