ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಹೊಡೆದ ಜಸ್ಪ್ರೀತ್ ಬುಮ್ರಾಗೆ ನಾಯಕ ವಿರಾಟ್ ಕೊಹ್ಲಿ ಗಾರ್ಡ್ ಆಫ್ ಆನರ್ ಸಲ್ಲಿಸಿದ್ದಾರೆ.
ಟೀಂ ಇಂಡಿಯಾದ ಅಗ್ರ ಪಂಕ್ತಿಯ ಬ್ಯಾಟ್ಸ್ ಮನ್ ಗಳು ಸಂಪೂರ್ಣ ವೈಫಲ್ಯ ಕಂಡಾಗ ಬುಮ್ರಾ ಅಂತಿಮ ವಿಕೆಟ್ ಗೆ ಮೊಹಮ್ಮದ್ ಸಿರಾಜ್ ಜತೆಗೆ 71 ರನ್ ಗಳ ಜತೆಯಾಟವಾಡಿದ್ದಲ್ಲದೆ, ಚೊಚ್ಚಲ ಅರ್ಧಶತಕ (55 ರನ್) ಗಳಿಸಿದ್ದರು. ಇದೇ ಮೊದಲ ಬಾರಿಗೆ ಅರ್ಧಶತಕ ಸಿಡಿಸಿದ ವೇಗಿಗೆ ನಾಯಕ ಕೊಹ್ಲಿ ಪೆವಿಲಿಯನ್ ಗೆ ಮರಳುವಾಗ ಇತರ ಆಟಗಾರರೊಂದಿಗೆ ಗಾರ್ಡ್ ಆಫ್ ಆನರ್ ಸಲ್ಲಿಸಿದ್ದಾರೆ.