ಹಮ್ಮು-ಬಿಮ್ಮು ಏನೂ, ಗೌತಮ್ ಗಂಭೀರ್ ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸ್ತಾರೆ ವಿರಾಟ್ ಕೊಹ್ಲಿ

Krishnaveni K
ಗುರುವಾರ, 1 ಆಗಸ್ಟ್ 2024 (11:57 IST)
ಕೊಲೊಂಬೊ: ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾದ ಬಳಿಕ ವಿರಾಟ್ ಕೊಹ್ಲಿ ಜೊತೆಗೆ ಅವರ ಹೊಂದಾಣಿಕೆ ಹೇಗಿರಬಹುದೋ ಎಂಬ ಆತಂಕ ಈಗ ದೂರವಾಗಿದೆ. ಮೊದಲ ದಿನವೇ ಗಂಭೀರ್-ಕೊಹ್ಲಿ ಆತ್ಮೀಯ ಕ್ಷಣಗಳ ಫೋಟೋ, ವಿಡಿಯೋ ವೈರಲ್ ಆಗುತ್ತಿದ್ದಂತೇ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಗಂಭೀರ್-ಕೊಹ್ಲಿ ನಡುವೆ ಐಪಿಎಲ್ ವೇಳೆ ಹಲವು ಬಾರಿ ಸಂಘರ್ಷಗಳಾಗಿವೆ. ಹಲವು ಬಾರಿ ಗಂಭೀರ್ ಕಾಮೆಂಟೇಟರ್ ಆಗಿ ಕೊಹ್ಲಿಯನ್ನು ಟೀಕಿಸಿದ್ದು ಇದೆ. ಆದರೆ ಇದೆಲ್ಲವೂ ಕೋಚ್ ಆದ ಮೇಲೆ ಗಂಭೀರ್ ಮರೆತು ಮುನ್ನಡೆಯಲು ತೀರ್ಮಾನಿಸಿದ್ದಾರೆ. ಕೊಹ್ಲಿ ಕೂಡಾ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಗಂಭೀರ್ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ.

ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಲು ಕೊಹ್ಲಿ-ಗಂಭೀರ್ ಜೊತೆಯಾಗಿದ್ದಾರೆ. ಟೀಂ ಇಂಡಿಯಾ ನೆಟ್ ಸೆಷನ್ ವೇಳೆ ಗಂಭೀರ್ ಮತ್ತು ಕೊಹ್ಲಿ ಜೊತೆಯಾಗಿ ಮಾತುಕತೆ ನಡೆಸುತ್ತಾ ಸಾಕಷ್ಟು ಸಮಯ ಕಳೆದಿದ್ದಾರೆ. ಈ ನಡುವೆ ಕೊಹ್ಲಿ ಜೋಕ್ ಮಾಡಿದ್ದು ಗಂಭೀರ್ ಮನಃಪೂರ್ವಕವಾಗಿ ನಗುತ್ತಾ ನಿಂತಿರುವ ಫೋಟೋಗಳು ವೈರಲ್ ಆಗಿದೆ.

ಅದರ ಜೊತೆಗೆ ಗಂಭೀರ್ ನೀಡಿರುವ ಸಲಹೆ ಸೂಚನೆಗಳನ್ನು ಗಂಭೀರವಾಗಿಯೇ ಪರಿಗಣಿಸಿರುವ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದುದು ಕಂಡುಬಂದಿದೆ. ಈ ಮೂಲಕ ತಮ್ಮಿಬ್ಬರ ನಡುವೆ ಏನಿಲ್ಲಾ ಏನಿಲ್ಲಾ ಎಂದು ಈ ಜೋಡಿ ಮತ್ತೊಮ್ಮೆ ಸಾಬೀತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

India vs Australia: ಶಹಬ್ಬಾಸ್‌, ಜೆಮಿಮಾ ರಾಡ್ರಿಗಸ್ ಅಬ್ಬರಕ್ಕೆ ಮಕಾಡೆ ಮಲಗಿದ ಆಸ್ಟ್ರೇಲಿಯಾ

INDW vs AUSW: ಗೆಲ್ಲಲಿ ಸೋಲಲಿ ಅಭಿಮಾನಿಗಳ ಕಣ್ಣಲ್ಲಿ ಹೀರೋ ಆದ ಜೆಮಿಮಾ ರೊಡ್ರಿಗಸ್

ರೋಹಿತ್ ಶರ್ಮಾ ಬಗ್ಗೆ ಬಂದ ರೂಮರ್ ಗಳಿಗೆ ಮುಂಬೈ ಇಂಡಿಯನ್ಸ್ ಮಹತ್ವದ ಹೇಳಿಕೆ

INDW vs AUSW: ಪಂದ್ಯಾಟದ ವೇಳೇ ಯಾಕೆ ಕಪ್ಪು ಪಟ್ಟಿ ಕಟ್ಟಿದ ಆಟಗಾರ್ತಿಯರು

INDW vs AUSW: ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತ ವನಿತೆಯರಿಗೆ ಸಂಕಷ್ಟ

ಮುಂದಿನ ಸುದ್ದಿ
Show comments