ಕೆಲವೇ ದಿನ ಮುಂಬೈನಲ್ಲಿದ್ದು ಪತ್ನಿ, ಮಕ್ಕಳ ಜೊತೆ ವಿರಾಟ್ ಕೊಹ್ಲಿ ಹೋಗಿದ್ದು ಈ ದೇಶಕ್ಕೆ

Krishnaveni K
ಸೋಮವಾರ, 11 ನವೆಂಬರ್ 2024 (13:39 IST)
ಸಿಡ್ನಿ: ಮುಂಬೈನಲ್ಲಿ ಕೆಲವು ದಿನ ತಂಗಿದ್ದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೆ ಪತ್ನಿ, ಮಕ್ಕಳ  ಜೊತೆ ವಿದೇಶ ಪ್ರಯಾಣ ಬೆಳೆಸಿದ್ದರು. ಅವರೀಗ ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಖಚಿತವಾಗಿದೆ.

ನವಂಬರ್ 26 ರಿಂದ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಇತ್ತೀಚೆಗೆ ಲಂಡನ್ ನಿವಾಸಿಯಾಗಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಕಳೆಗುಂದಿದ್ದಾರೆ. ಈ ಕಾರಣಕ್ಕೆ ಈ ಸರಣಿಯಲ್ಲಾದರೂ ಅವರು ಫಾರ್ಮ್ ಗೆ ಬರಲಿ ಎಂದು ಜನ ಆಶಿಸುತ್ತಿದ್ದಾರೆ.

ಇದೀಗ ವಿರಾಟ್ ಕೊಹ್ಲಿ ಎಲ್ಲರಿಗಿಂತ ಮೊದಲೇ ಆಸ್ಟ್ರೇಲಿಯಾಗೆ ಬಂದು ತಲುಪಿದ್ದಾರೆ. ಟೀಂ ಇಂಡಿಯಾ ಎ ತಂಡ ಈಗಾಗಲೇ ಆಸ್ಟ್ರೇಲಿಯಾ ಎ ತಂಡದ ಜೊತೆಗೆ ಎರಡು ಟೆಸ್ಟ್ ಪಂದ್ಯವಾಡಿದ್ದು ಎರಡರಲ್ಲೂ ಸೋಲು ಅನುಭವಿಸಿದೆ. ಈ ಸರಣಿಯಲ್ಲಿ ಕೆಎಲ್ ರಾಹುಲ್ ರಂತಹ ಟೆಸ್ಟ್ ತಂಡದ ಆಟಗಾರರಿದ್ದರು.

ಇದೀಗ ಸೀನಿಯರ್ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮೊದಲನೆಯವರಾಗಿ ಆಸ್ಟ್ರೇಲಿಯಾಗೆ ತಲುಪಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೇ ಇತರೆ ಟೀಂ ಇಂಡಿಯಾ ಆಟಗಾರರೂ ಆಸ್ಟ್ರೇಲಿಯಾಗೆ ಬಂದಿಳಿಯಲಿದ್ದಾರೆ. ರೋಹಿತ್ ಶರ್ಮಾ ತಡವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND- SA 2nd ODI: ವಿರಾಟ್‌, ಋತುರಾಜ್‌ ಶತಕ ವ್ಯರ್ಥ; ರನ್‌ ಮಳೆಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ,

ಶತಕದ ಬೆನ್ನಲ್ಲೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿಗೆ ಬಡ್ತಿ: ಅಗ್ರಸ್ಥಾನದಲ್ಲಿ ರೋಹಿತ್‌ ಶರ್ಮಾ

ವಿರಾಟ್‌ ಕೊಹ್ಲಿ ದಾಖಲೆಯ 53ನೇ ಏಕದಿನ ಶತಕ: ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ

ಐಸಿಸಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಾಗ್ದಂಡನೆಗೆ ಗುರಿಯಾದ ಗಂಭೀರ್‌ ಮಾನಸಪುತ್ರ ಹರ್ಷಿತ್ ರಾಣಾ

IND vs SA ODI: ದಾಖಲೆಯ 20ನೇ ಬಾರಿ ಟಾಸ್ ಸೋತ ಭಾರತ: ದ.ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆ

ಮುಂದಿನ ಸುದ್ದಿ
Show comments