ಮುಂಬೈಗೆ ಬಂದ ವಿರಾಟ್ ಕೊಹ್ಲಿ ಅಭಿಮಾನಿ, ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗಳಿಗೆ ಅಭಿಮಾನಿಗಳು ಎಚ್ಚರಿಕೆ ನೀಡಿದ್ದೇಕೆ?! !

Webdunia
ಶುಕ್ರವಾರ, 23 ಮಾರ್ಚ್ 2018 (09:03 IST)
ಮುಂಬೈ: ವಿರಾಟ್ ಕೊಹ್ಲಿಯನ್ನು ಅತಿಯಾಗಿ ಆರಾಧಿಸುವ ಮಹಿಳಾ ಅಭಿಮಾನಿಗಳ ಪೈಕಿ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ಕೂಡಾ ಒಬ್ಬರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಈ ಆಟಗಾರ್ತಿ ಕೊಹ್ಲಿಗೆ ಮದುವೆಯಾಗುವಂತೆಯೂ ಪ್ರಪೋಸ್ ಮಾಡಿದ್ದರು. ಕೊಹ್ಲಿ, ಡೇನಿಯಲ್ ಗೆ ಹೀಗೆಲ್ಲಾ ಹೇಳಿಕೆ ಕೊಡಬೇಡ ಎಂದು ಬುದ್ಧಿವಾದ ಹೇಳಿ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.

ಇದೀಗ ಅದೇ ಡೇನಿಯಲ್ ಕ್ರಿಕೆಟ್ ಸರಣಿ ಆಡಲು ಭಾರತಕ್ಕೆ ಬಂದಿಳಿದಿದ್ದಾರೆ. ಮುಂಬೈನಲ್ಲಿ ಬೀಡುಬಿಟ್ಟಿರುವ ಡೇನಿಯಲ್ ಟ್ವಿಟರ್ ನಲ್ಲಿ ಇಲ್ಲಿನ ಎಲಿಫಾಂಟಾ ದ್ವೀಪಕ್ಕೆ ಬೋಟ್ ನಲ್ಲಿ ಸಾಗುತ್ತಿರುವುದಾಗಿ ಟ್ವೀಟ್ ಮಾಡಿದ್ದರು. ಇದನ್ನು ನೋಡಿ ಅಭಿಮಾನಿಗಳು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಕೊಹ್ಲಿ ಮನೆಗೆ ಇಲ್ಲಿಂದ 12 ಕಿ.ಮೀ. ದೂರವಷ್ಟೇ ಎಂದು ಕೆಲವರು ಕಾಲೆಳೆದರೆ, ಇನ್ನೊಬ್ಬರು ಅನುಷ್ಕಾ ಶರ್ಮಾ ಬಗ್ಗೆ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಮತ್ತೆ ಕೆಲವರು ಕೊಹ್ಲಿಗೆ, ಆಕೆ ನಿಮ್ಮನ್ನು ಗಮನಿಸುತ್ತಿದ್ದಾರೆ. ಎಚ್ಚರಿಕೆಯಿಂದಿರಿ ಎಂದು ತಮಾಷೆಯಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಟಿ20 ಸರಣಿಗಾಗಿ ಅವರು ಭಾರತಕ್ಕೆ ಬಂದಿಳಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟಿಕೆಟ್ ಎಲ್ಲಿ ಹೋಯ್ತು.. ಮಹಿಳಾ ವಿಶ್ವಕಪ್ ಫೈನಲ್ ಗೆ ಮುನ್ನ ಅಭಿಮಾನಿಗಳಿಂದ ಭಾರೀ ಆಕ್ರೋಶ

ದಬಂಗ್‌ ಡೆಲ್ಲಿ ತಂಡಕ್ಕೆ ಪ್ರೊ ಕಬಡ್ಡಿ ಲೀಗ್‌ ಕಿರೀಟ: ಫೈನಲ್‌ನಲ್ಲಿ ಮುಗ್ಗರಿಸಿದ ಪಟ್ನಾ ಪೈರೇಟ್ಸ್‌

ಕರ್ನಾಟಕ ದತ್ತುಪುತ್ರ ನಾನು.. ಕನ್ನಡ ರಾಜ್ಯೋತ್ಸವಕ್ಕೆ ದಿನೇಶ್ ಕಾರ್ತಿಕ್ ಹೇಳಿದ್ದೇನು Video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೇಯಸ್ ಅಯ್ಯರ್: ಲೇಟೆಸ್ಟ್ ಹೆಲ್ತ್ ಅಪ್ ಡೇಟ್ ಇಲ್ಲಿದೆ

ಆಸ್ಟ್ರೇಲಿಯಾಕ್ಕೆ ಶನಿ ದೆಸೆ ಶುರುವಾಗಿದ್ದು ಇಲ್ಲಿಂದಲೇ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments