Webdunia - Bharat's app for daily news and videos

Install App

ಕೊಹ್ಲಿ ಫ್ಯಾನ್ಸ್ ಆಕ್ರೋಶ ತಣ್ಣಗಾಗಿಸಿದ ಇಶಾನ್ ಕಿಶನ್ ಹೇಳಿಕೆ

Webdunia
ಸೋಮವಾರ, 24 ಜುಲೈ 2023 (08:30 IST)
Photo Courtesy: Twitter
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲು ಇಶಾನ್ ಕಿಶನ್ ಬ್ಯಾಟಿಂಗ್ ಗಿಳಿದಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಕೊಹ್ಲಿ ಕ್ರಮಾಂಕದಲ್ಲಿ ಇಶಾನ್ ರನ್ನು ಬ್ಯಾಟಿಂಗ್ ಗಿಳಿಸಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಮೇಲೆ ಕೊಹ್ಲಿ ಫ್ಯಾನ್ಸ್ ಗರಂ ಆಗಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ರನ್ನು ನಿಂದಿಸುತ್ತಿದ್ದರು. ಆದರೆ ಇಶಾನ್ ಕಿಶನ್ ಹೇಳಿಕೆ ಎಲ್ಲಾ ಅನುಮಾನಗಳನ್ನು ದೂರ ಮಾಡಿದೆ.

ನಿನ್ನೆಯ ದಿನದಾಟದ ಬಳಿಕ ಮಾತನಾಡಿದ ಇಶಾನ್ ಕಿಶನ್ ನನ್ನನ್ನು ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಹೋಗಲು ಹೇಳಿದ್ದೇ ವಿರಾಟ್ ಕೊಹ್ಲಿ ಎಂದಿದ್ದಾರೆ ಇಶಾನ್. ‘ವಿರಾಟ್ ಭಾಯಿ ನನ್ನನ್ನು ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸೂಚಿಸಿದರು. ಸ್ಲೋ ಲೆಫ್ಟ್ ಆರ್ಮರ್ ಬೌಲಿಂಗ್ ಮಾಡುತ್ತಿದ್ದರು. ಹೀಗಾಗಿ ವೇಗವಾಗಿ ರನ್ ಗಳಿಸಲು ನನ್ನನ್ನೇ ಅವರ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಲು ಸೂಚಿಸಿದರು. ನಿನ್ನ ನ್ಯಾಚುರಲ್ ಗೇಮ್ ಆಡು ಎಂದರು. ಕೆಲವೊಮ್ಮೆ ತಂಡಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದಿದ್ದಾರೆ ಇಶಾನ್. ಈ ಇನಿಂಗ್ಸ್ ನಲ್ಲಿ ಇಶಾನ್ 34 ಎಸೆತಗಳಿಂದ ಅಜೇಯ 52 ರನ್ ಸಿಡಿಸಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

ಮುಂದಿನ ಸುದ್ದಿ
Show comments