Virat Kohli: ನೀವೇ ಕರೆಸಿ ಜಾತ್ರೆ ಮಾಡಿ ಈಗ ವಿರಾಟ್ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ

Krishnaveni K
ಶನಿವಾರ, 7 ಜೂನ್ 2025 (10:24 IST)
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತಕ್ಕೆ ಸಂಭವಿಸಿದಂತೆ ವಿರಾಟ್ ಕೊಹ್ಲಿ ಮೇಲೆ ದೂರು ದಾಖಲಿಸಿರುವುದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವೇ ಕರೆಸಿ ಜಾತ್ರೆ ಮಾಡಿ ಈಗ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ ಎಂದು ಪ್ರಶ್ನಿಸಿದ್ದಾರೆ.

ಆರ್ ಸಿಬಿ ಆಟಗಾರರನ್ನು ಕರೆಸಿದ್ದಾಗ ಹೆಚ್ಚಿನ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ನೋಡುವ ಉದ್ದೇಶದಿಂದಲೇ ಸಾಗರದಂತೆ ಬಂದಿದ್ದರು. ಸಾಮಾನ್ಯ ಜನ ಮಾತ್ರವಲ್ಲ, ಸಿಎಂ ಮೊಮ್ಮಗ, ಸಚಿವರ ಮಕ್ಕಳು, ಅಧಿಕಾರಿಗಳ ಮಕ್ಕಳು ಸೇರಿದಂತೆ ಪ್ರಭಾವಿಗಳೂ ವೇದಿಕೆಯಲ್ಲೇ ನೆರೆದಿದ್ದರು.

ಇದೀಗ ನೈಜ ಹೋರಾಟಗಾರರ ಸಂಘ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೊಹ್ಲಿ ವಿರುದ್ಧ ದೂರು ನೀಡಿದೆ. ಘಟನೆಗೆ ಕೊಹ್ಲಿ ಕೂಡಾ ಕಾರಣ. ದುರಂತದ ಬಳಿಕ ಕೊಹ್ಲಿ ಸಂತ್ರಸ್ತರ ಕುಟುಂಬವನ್ನೂ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ ಇದರ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರು ನೀಡುವವರಿಗೆ ಸ್ವಲ್ಪವಾದರೂ ತಲೆಯಿದೆಯೇ?  ಒಂದು ವೇಳೆ ಕೊಹ್ಲಿ ಮತ್ತೆ ಸಂತ್ರಸ್ತರ ಭೇಟಿಗೆ ಬಂದಿದ್ದರೆ ಮತ್ತಷ್ಟು ನೂಕುನುಗ್ಗಲು ಆಗುತ್ತಿರಲಿಲ್ಲವೇ? ಅಷ್ಟಕ್ಕೂ ಈ ಘಟನೆಗೆ ಕೊಹ್ಲಿ ಹೇಗೆ ಕಾರಣ? ಕರೆಸಿಕೊಂಡವರು, ಜಾತ್ರೆ ಮಾಡಿದವರು ಯಾರೋ... ಕೊಹ್ಲಿ ಹೇಗೆ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

IND vs SA Test: ಟೀಂ ಇಂಡಿಯಾ ನಾಳೆಯೇ ಟೆಸ್ಟ್ ಮ್ಯಾಚ್ ಮುಗಿಸೋದು ಪಕ್ಕಾ

IND vs SA: ಬ್ಯಾಟಿಂಗ್ ನಿಲ್ಲಿಸಿ ದಿಡಿರ್ ಮೈದಾನ ತೊರೆದ ಕ್ಯಾಪ್ಟನ್ ಶುಭಮನ್ ಗಿಲ್

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ಮುಂದಿನ ಸುದ್ದಿ
Show comments