Select Your Language

Notifications

webdunia
webdunia
webdunia
webdunia

ದುರಾದೃಷ್ಟವನ್ನು ಬದಿಗೊತ್ತಿ ವೆಸ್ಟ್ ಇಂಡೀಸ್‌ನಲ್ಲಿ ಮೊದಲ ಶತಕ ಸಿಡಿಸಿದ ಕೊಹ್ಲಿ

ದುರಾದೃಷ್ಟವನ್ನು ಬದಿಗೊತ್ತಿ ವೆಸ್ಟ್ ಇಂಡೀಸ್‌ನಲ್ಲಿ ಮೊದಲ ಶತಕ ಸಿಡಿಸಿದ ಕೊಹ್ಲಿ
ಆ್ಯಂಟಿಗುವಾ , ಶುಕ್ರವಾರ, 22 ಜುಲೈ 2016 (10:52 IST)
ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಗುರುವಾರದವರೆಗೆ ಸಂತೋಷದ ಬೇಟೆಯ ತಾಣವಾಗಿರಲಿಲ್ಲ. ವೆಸ್ಟ್ ಇಂಡೀಸ್‌ನಲ್ಲಿ ಕಳಪೆ ಸಾಧನೆ ಮಾಡಿದ್ದಾರೆಂಬ ದುರಾದೃಷ್ಟವನ್ನು ಅಳಿಸಿದ ಭಾರತದ ನಾಯಕ ಆ್ಯಂಟಿಗುವಾದ ಮೊದಲ ಟೆಸ್ಟ್‌ನಲ್ಲಿ ಪ್ರಥಮ ಶತಕ ದಾಖಲಿಸಿದ್ದಾರೆ. ಇದು ಅವರ 12ನೇ ಶತಕವಾಗಿದ್ದು, ಮೊದಲ ದಿನದಾಟದಲ್ಲಿ ಕೊಹ್ಲಿ 143ಕ್ಕೆ ಒಂದು ವಿಕೆಟ್ ಕಬಳಿಸಿದ್ದು, ಭಾರತ 4 ವಿಕೆಟ್‌ಗೆ 302 ರನ್ ಗಳಿಸಿದೆ.
 
ಭಾರತದ ನಾಯಕ ಈಗಾಗಲೇ ತಮ್ಮ ಇನ್ನಿಂಗ್ಸ್‌ನಲ್ಲಿ 3000 ಟೆಸ್ಟ್ ರನ್ ಪೂರೈಸಿದ್ದಾರೆ. ಪೂಜಾರಾ ಔಟಾದ ಕೂಡಲೇ ಕ್ರೀಸ್‌ಗೆ ಬಂದ ಕೊಹ್ಲಿ ಇನ್ನಿಂಗ್ಸ್ ನಿಯಂತ್ರಣಕ್ಕೆ ತೆಗೆದುಕೊಂಡರು. ಬಿಶೂ ಅವರ ಎಸೆತದಲ್ಲಿ ಮೊದಲ ಬೌಂಡರಿಯೊಂದಿಗೆ ಕೊಹ್ಲಿ 3000 ರನ್ ಗಡಿಯನ್ನು ದಾಟಿದರು. ಇನ್ನೂ ಐದು ಬೌಂಡರಿಗಳನ್ನು ಸಿಡಿಸಿ 75 ಎಸೆತಗಳಲ್ಲಿ ಅರ್ಧಶತಕವನ್ನು ಮುಟ್ಟಿದರು.
ಕೊಹ್ಲಿ ಮತ್ತು ಶಿಖರ್ ಧವನ್ ಮೂರನೇ ವಿಕೆಟ್‌ಗೆ 105 ರನ್ ಕಲೆಹಾಕಿದರು. ಶಿಖರ್ ಧವನ್ ಬಿಶೂಲ್ ಬೌಲಿಂಗ್‌ನಲ್ಲಿ ಸ್ವೀಪ್‌ಗೆ ಯತ್ನಿಸಿ ಎಲ್‌ಬಿಡಬ್ಲ್ಯುಗೆ ಬಲಿಯಾದರು.
 
ವೆಸ್ಟ್ ಇಂಡೀಸ್ ವಿರುದ್ಧ ಅವರ ಅಂಕಿಅಂಶಗಳು ಇದುವರೆಗೆ ತೃಪ್ತಿದಾಯಕವಾಗಿರಿಲ್ಲ. 2011ರಲ್ಲಿ ಕೊಹ್ಲಿ ವೆಸ್ಟ್ ಇಂಡೀಸ್‌ನಲ್ಲಿ 4,15, 0, 27, 30 ರನ್ ಸ್ಕೋರ್ ಮಾಡಿದ್ದರು. ಅವರು ಕ್ಯಾರಿಬಿಯನ್ಸ್ ವಿರುದ್ದ 27.88 ಸರಾಸರಿ ಹೊಂದಿದ್ದು, ವೆಸ್ಟ್ ಇಂಡೀಸ್‌ನಲ್ಲಿ ಅವರ ಸರಾಸರಿ 15.20ರಷ್ಟಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಅಮೋಘ 143: ಭಾರತ 4ಕ್ಕೆ 302 ಸವಾಲಿನ ಮೊತ್ತ(ವಿಡಿಯೊ)