ಮಗಳ ಫೋಟೋ ರಿವೀಲ್ ಆದ ಬೆನ್ನಲ್ಲೇ ಮಾಧ್ಯೋಮಗಳಿಗೆ ಮನವಿ ಮಾಡಿದ ವಿರಾಟ್ ಕೊಹ್ಲಿ ದಂಪತಿ

Webdunia
ಸೋಮವಾರ, 24 ಜನವರಿ 2022 (17:15 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯ ವೀಕ್ಷಿಸುತ್ತಿರುವ ತಮ್ಮ ಮಗಳು ವಮಿಕಾ ಫೋಟೋ ಟಿವಿ ಮೂಲಕ ಬಹಿರಂಗವಾಗುತ್ತಿದ್ದಂತೇ ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.

ವಿರಾಟ್ ದಂಪತಿ ತಮ್ಮ ಮಗಳ ಫೋಟೋವನ್ನು ಇದುವರೆಗೆ ರಿವೀಲ್ ಮಾಡಿಲ್ಲ. ಖಾಸಗಿತನ ಕಾಪಾಡುವ ಉದ್ದೇಶದಿಂದ ನಮ್ಮ ಮಗಳ ಫೋಟೋವನ್ನು ಯಾರೂ ಪ್ರಕಟಿಸಬೇಡಿ ಎಂದು ಇದುವರೆಗೆ ಕೊಹ್ಲಿ ದಂಪತಿ ಹೇಳುತ್ತಲೇ ಇದ್ದಾರೆ. ಹೀಗಾಗಿ ಫೋಟೋಗ್ರಾಫರ್ ಗಳಿಗೂ ತಮ್ಮ ಮಗಳ ಫೋಟೋ ತೆಗೆಯಲು ಬಿಟ್ಟಿಲ್ಲ.

ಆದರೆ ನಿನ್ನೆಯ ಪಂದ್ಯದ ನಡುವೆ ಅನುಷ್ಕಾ ಕೈಯಲ್ಲಿದ್ದ ವಮಿಕಾ ತಂದೆಯ ಆಟ ನೋಡಿ ಖುಷಿಪಡುತ್ತಿರುವ ದೃಶ್ಯ ನೇರಪ್ರಸಾರವಾಗಿತ್ತು. ಇದನ್ನೇ ಇಟ್ಟುಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ‍್ಯಮಗಳಲ್ಲಿ ವಮಿಕಾ ಫೋಟೋ ಪ್ರಕಟಿಸಲಾಗಿತ್ತು.

ಇದರ ಬೆನ್ನಲ್ಲೇ ಕೊಹ್ಲಿ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಸೋಷಿಯಲ್ ಮೀಡಿಯಾಗೆ, ಮಾಧ‍್ಯಮಗಳಿಗೆ ಮನವಿ ಮಾಡಿದ್ದು, ದಯವಿಟ್ಟು ನಮ್ಮ ಮಗಳ ಫೋಟೋವನ್ನು ಪ್ರಕಟಿಸಬೇಡಿ, ಡಿಲೀಟ್ ಮಾಡಿ. ನಿನ್ನೆ ಟಿವಿ ಕ್ಯಾಮರಾ ನಮ್ಮನ್ನು ಫೋಕಸ್ ಮಾಡಿದ್ದು ಗೊತ್ತಾಗಿರಲಿಲ್ಲ. ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಶ್ರೇಯಸ್ ಅಯ್ಯರ್ ಪೋಷಕರ ಆಗಮನಕ್ಕಾಗಿ ಕಾಯುತ್ತಿರುವ ಬಿಸಿಸಿಐ, ಯಾಕೆ ಗೊತ್ತಾ

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಮುಂದಿನ ಸುದ್ದಿ
Show comments