Webdunia - Bharat's app for daily news and videos

Install App

ಥೇಟ್ ತಂದೆಗೆ ತಕ್ಕ ಮಗ.. ಸಮಿತ್ ದ್ರಾವಿಡ್ ರ ಒಂದೊಂದು ಶಾಟ್ ನೋಡ್ತಿದ್ರೆ ನಿಮಗೆ ರಾಹುಲ್ ದ್ರಾವಿಡ್ ನೆನಪಾಗೇ ಆಗ್ತಾರೆ Video

ಕೃಷ್ಣವೇಣಿ ಕೆ
ಗುರುವಾರ, 2 ಜುಲೈ 2026 (18:22 IST)
Photo Credit: X
ಮುಂಬೈ: ಟೀಂ ಇಂಡಿಯಾ ವಾಲ್ ಎಂದೇ ಜನಜನಿತವಾಗಿದ್ದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಕ್ಕಳು ಈಗ ಕಿರಿಯರ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಸಮಿತ್ ದ್ರಾವಿಡ್ ಬ್ಯಾಟಿಂಗ್ ನೋಡುತ್ತಿದ್ದರೆ ನಿಮಗೆ ಥೇಟ್ ರಾಹುಲ್ ದ್ರಾವಿಡ್ ರನ್ನು ನೋಡಿದಂತೇ ಆಗುತ್ತದೆ. ಆ ವಿಡಿಯೋ ಇಲ್ಲಿದೆ ನೋಡಿ.
 

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ KSCA T20 2026 ಟೂರ್ನಿಯಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಮಿತ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜುಲೈ 1 ರಂದು ನಡೆದ ಹುಬ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪರ ಕಣಕ್ಕಿಳಿದಿದ್ದ ಸಮಿತ್, ಮೌನವಾಗಿ ಕ್ರೀಸ್ ಕಾಯುವ ತಮ್ಮ ತಂದೆಯ ಶೈಲಿಗಿಂತ ಸಂಪೂರ್ಣ ಭಿನ್ನವಾಗಿ 'ಮಿಸ್ಟರ್ 360 ಡಿಗ್ರಿ' ಅವತಾರವೆತ್ತಿ ಅಬ್ಬರಿಸಿದ್ದಾರೆ.

ಪಂದ್ಯದಲ್ಲಿ ಆರಂಭಿಕ ಆಘಾತದ ಬಳಿಕ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಮಿತ್ ದ್ರಾವಿಡ್, ಎದುರಿಸಿದ ಪ್ರತಿಯೊಬ್ಬ ಬೌಲರ್ ಮೇಲೂ ಸವಾರಿ ಮಾಡಿದರು. ಮೈದಾನದ ಎಲ್ಲಾ ದಿಕ್ಕುಗಳಿಗೂ ಮನಬಂದಂತೆ ಚೆಂಡನ್ನು ಅಟ್ಟಿದ ಅವರು ಕೇವಲ 23 ಎಸೆತಗಳಲ್ಲಿ 6 ಆಕರ್ಷಕ ಬೌಂಡರಿಗಳ ನೆರವಿನಿಂದ 32 ರನ್ ಚಚ್ಚಿದರು. ಅವರ ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಮೂಡಿಬಂದ ರಿವರ್ಸ್ ಸ್ವೀಪ್, ಕ್ಲಾಸ್ ಕಟ್ ಶಾಟ್‌ಗಳು ಮತ್ತು ಲಾಫ್ಟೆಡ್ ಡ್ರೈವ್‌ಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಮಿತ್ ಬ್ಯಾಟಿಂಗ್ ನೋಡುತ್ತಿದ್ದರೆ ತಂದೆಯ ಬ್ಯಾಟಿಂಗ್ ನೋಡುತ್ತಿದ್ದ ಹಾಗೇ ಆಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


pic.twitter.com/38Fw6pyTol

 

— Ajay Jadeja (@AjayJadeja171) July 2, 2026

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನನಗೆ ಆತ ಏನು ಹೇಳಿದ್ದ ಎಂದು ಗೊತ್ತಿಲ್ಲದೇ ಜಡ್ಜ್ ಮಾಡಬೇಡಿ: ಕಿತ್ತಾಡಿದ್ದಕ್ಕೆ ಯಶಸ್ವಿ ಜೈಸ್ವಾಲ್ ಖಡಕ್ ಹೇಳಿಕೆ

IND vs SL: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೊಸ ದಾಖಲೆ

Ind vs SL 2nd TEST: ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ

ವಿಡಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಡಬಲ್ಸ್‌ ಆಟಗಾರ್ತಿಯರ ಚಾರಿತ್ರಿಕ ಸಾಧನೆ

IND vs SL: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮುಂದಿನ ಟೆಸ್ಟ್ ಯಾವಾಗ, ಸಮಯ, ಲೈವ್ ಸ್ಟ್ರೀಮಿಂಗ್ ಡೀಟೈಲ್ ಇಲ್ಲಿದೆ

ಮುಂದಿನ ಸುದ್ದಿ
Show comments