Publish Date: Mon, 07 Sep 2026 (09:45 IST)
Updated Date: Mon, 07 Sep 2026 (09:51 IST)
ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ನೀಡಿದ ಹೀನಾಯ ಪ್ರದರ್ಶನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಂದ್ಯಕ್ಕೂ ಮುನ್ನವೇ ವಿಜಯೋತ್ಸವದ ಭಂಗಿಗಳನ್ನು ಅಭ್ಯಾಸ ಮಾಡುತ್ತಿದ್ದ ಪಾಕ್ ಆಟಗಾರ್ತಿಯರು, ಮೈದಾನದಲ್ಲಿ ಮಾತ್ರ ಕೇವಲ 55 ರನ್‌ಗಳಿಗೆ ಧೂಳೀಪಟವಾಗಿದ್ದಾರೆ. ಈ ಕಳಪೆ ಪ್ರದರ್ಶನವನ್ನು ಕಂಡ ನೆಟ್ಟಿಗರು "ಪರ್ಫಾರ್ಮೆನ್ಸ್ ಶೂನ್ಯ, ಬರೀ ಡ್ರಾಮಾ" ಎಂದು ಹಿಗ್ಗಾಮಗ್ಗಾ ಕಾಲೆಳೆಯುತ್ತಿದ್ದಾರೆ.
ಕೇವಲ 55 ರನ್‌ಗೆ ಕುಸಿದ ಪಾಕ್ ಪಡೆ
ಏಷ್ಯಾ ಕಪ್‌ನಲ್ಲಿ ಭಾರತೀಯ ಬೌಲರ್‌ಗಳ ಘಾತಕ ದಾಳಿಗೆ ತಲೆಬಾಗಿದ ಪಾಕಿಸ್ತಾನ ಮಹಿಳಾ ತಂಡ, ರನ್ ಗಳಿಸಲು ಕಷ್ಟಪಟ್ಟು ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಇಡೀ ತಂಡ ಕೇವಲ 55 ರನ್‌ಗಳಿಗೆ ಆಲ್ ಔಟ್ ಆಗುವ ಮೂಲಕ ಟೂರ್ನಿಯಲ್ಲಿ ಆಘಾತಕಾರಿ ಹಿನ್ನಡೆ ಅನುಭವಿಸಿತು.
ಕೇವಲ 8.4 ಓವರ್‌ಗಳಲ್ಲಿ ಗೆದ್ದು ಬೀಗಿದ ಭಾರತ
ಅಲ್ಪ ಮೊತ್ತದ ಸವಾಲನ್ನು ಬೆನ್ನಟ್ಟಿದ ಭಾರತೀಯ ಮಹಿಳಾ ತಂಡದ ಬ್ಯಾಟರ್‌ಗಳು ಆರಂಭದಿಂದಲೇ ಬಿರುಸಿನ ಆಟ ಪ್ರದರ್ಶಿಸಿದರು. ಎದುರಾಳಿ ಬೌಲರ್‌ಗಳನ್ನು ದಂಡಿಸಿದ ಭಾರತೀಯ ಆಟಗಾರ್ತಿಯರು, ಕೇವಲ 8.4 ಓವರ್‌ಗಳಲ್ಲಿ ಯಾವುದೇ ಶ್ರಮವಿಲ್ಲದೆ ಗೆಲುವಿನ ದಂಡೆ ತಲುಪಿದರು. ಈ ಭರ್ಜರಿ ಜಯದೊಂದಿಗೆ ಭಾರತ ಏಷ್ಯಾ ಕಪ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಳೆ
ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಗೆಲುವಿನ ಸಂಭ್ರಮಾಚರಣೆಯ ಭಂಗಿಗಳನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದ ಪಾಕಿಸ್ತಾನ ತಂಡದ ವೀಡಿಯೋಗಳು ಹಾಗೂ ಫೋಟೋಗಳನ್ನು ಇಟ್ಟುಕೊಂಡು ನೆಟಿಜನ್‌ಗಳು ತರಹೇವಾರಿ ಮೀಮ್ಸ್ ಹಂಚಿಕೊಳ್ಳುತ್ತಿದ್ದಾರೆ. "ಮೈದಾನದಲ್ಲಿ ಆಟವಾಡುವುದನ್ನು ಬಿಟ್ಟು ಡ್ರಾಮಾ ಮಾಡಿದ್ದೇ ಹೆಚ್ಚಾಯಿತು. ಬಾಕಿ ಉಳಿದ ವಿಜಯೋತ್ಸವದ ಸಂಭ್ರಮವನ್ನು ವಿಮಾನವೇರಿ ಪಾಕಿಸ್ತಾನಕ್ಕೆ ತಲುಪಿದ ಮೇಲೆಯೇ ಮಾಡಿಕೊಳ್ಳಿ" ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ಅತಿಯಾದ ಆತ್ಮವಿಶ್ವಾಸ ಮತ್ತು ಮೈದಾನದಲ್ಲಿ ಪ್ರದರ್ಶನಕ್ಕಿಂತ ಡ್ರಾಮಾಗೆ ಹೆಚ್ಚಿನ ಆದ್ಯತೆ ನೀಡಿದ್ದೇ ಪಾಕಿಸ್ತಾನ ಮಹಿಳಾ ತಂಡದ ಈ ಮುಖಭಂಗಕ್ಕೆ ಕಾರಣ ಎಂದು ಕ್ರಿಕೆಟ್ ಪ್ರೇಮಿಗಳು ಕಾಲೆಳೆಯುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ