ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜೂನ್ 4 ರಂದು ಪಂದ್ಯ ನಡೆಯುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಈ ಪಂದ್ಯವೇನೋ ನಿಗದಿಯಂತೆ ನಡೆಯಲಿದೆ. ಆದರೆ ಇದಕ್ಕೂ ಮೊದಲು ದುಬೈನಲ್ಲಿ ಉಭಯ ದೇಶಗಳ ನಡುವಿನ ಸರಣಿ ಬಗ್ಗೆ ಸಭೆ ನಡೆಸಲು ಮುಂದಾದ ಬಿಸಿಸಿಐ ವಿರುದ್ಧ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಸಿದೆ. ಸಭೆ ನಡೆಸಲು ಮುಂದಾದ ಬಿಸಿಸಿಐ ವಿರುದ್ಧ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೊಯೆಲ್ ಹರಿಹಾಯ್ದಿದ್ದಾರೆ.
ಈ ಮೊದಲು ಒಪ್ಪಂದವಾದ ಸರಣಿಗಳನ್ನು ನಡೆಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕುತ್ತಲೇ ಇತ್ತು. ಈ ನಿಟ್ಟಿನಲ್ಲಿ ತಟಸ್ಥ ಸ್ಥಳದಲ್ಲಿ ಸರಣಿ ಆಯೋಜಿಸುವ ಬಗ್ಗೆ ಮಾತುಕತೆ ನಡೆಸಲು ಬಿಸಿಸಿಐ ಮತ್ತು ಪಿಸಿಬಿ ಇಂದು ಸಭೆ ಸೇರುವುದಿತ್ತು. ಇದಕ್ಕೆ ಕೇಂದ್ರ ಅಪಸ್ವರವೆತ್ತಿದೆ.
ಭಯೋತ್ಪಾದನೆ ಮತ್ತು ಕ್ರೀಡೆ ಒಂದೇ ಹಾದಿಯಲ್ಲಿ ಸಾಗದು. ಕೇಂದ್ರದ ಜತೆ ಚರ್ಚಿಸದೇ ಬಿಸಿಸಿಐ ಪಾಕ್ ಜತೆ ಆಡುವ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ