ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಪಾಕಿಸ್ತಾನ ತಂಡಕ್ಕೆ ಮರಳಿದ್ದಾರೆ. ಸೆಪ್ಟೆಂಬರ್ 23 ರಿಂದ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧ ದುಬೈನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ತಂಡದ ಭಾಗವಾಗಿರುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ಘೋಷಿಸಿದೆ.
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವ ಕಪ್ ಪಂದ್ಯಾವಳಿಯಲ್ಲಿ ಅಕ್ಮಲ್ ಆಸ್ಟೇಲಿಯಾ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದರು.
ಒಟ್ಟು 15 ಆಟಗಾರರ ತಂಡವನ್ನು ಪಿಸಿಬಿ ಶುಕ್ರವಾರ ಪ್ರಕಟಿಸಿದ್ದು ಸರ್ಫರಾಜ್ ಅಹ್ಮದ್ ತಂಡವನ್ನು ಮುನ್ನಡೆಯಲಿದ್ದಾರೆ.
ರಾಷ್ಟ್ರೀಯ ಟಿ20 ಪಂದ್ಯಾವಳಿಯಲ್ಲಿ ಅಕ್ಮಲ್ ರನ್ ಹೊಳೆಯನ್ನೇ ಹರಿಸಿದ್ದರು. ಲಾಹೋರ್ ವೈಟ್ ಪರ ಆಡಿದ್ದ ಅವರು 304 ರನ್ ದಾಖಲಿಸಿದ್ದರು. ಅವರ ಸ್ಟ್ರೈಕ್ ರೇಟ್ 202.66 ಆಗಿತ್ತು. ರಾವಲ್ಪಿಂಡಿಯಲ್ಲಿ ಅಜೇಯ 115 ರನ್ ಸಿಡಿಸಿದ್ದರು. ಇದೇ ಪಂದ್ಯಾವಳಿಯ ಮತ್ತೆರಡು ಪಂದ್ಯಗಳಲ್ಲಿ 75 ಮತ್ತು 81 ರನ್ ಗಳಿಸಿದ್ದರು. ಹೀಗಾಗಿ ಅವರಿಗೆ ರಾಷ್ಟ್ರೀಯ ತಂಡಕ್ಕೆ ಬುಲಾವ್ ನೀಡಲಾಗಿದೆ.
ಎಡಗೈ ವೇಗಿ ರುಮಾನ್ ರಯೀಸ್ ಮತ್ತು ಸಾಧ್ ನಸೀಮ್ ಕೂಡ ತಂಡಕ್ಕೆ ಮರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ